ವಿದ್ಯಾರ್ಥಿಗಳಲ್ಲಿ ಮನೋಸ್ಥೈರ್ಯವಿರಲಿ:ಡಾ.ಅಬ್ದುಲ್‌ಅಜೀಜ ಮುಲ್ಲಾ

0
1st PU Students Welcome Ceremony and College Parliament Inauguration Ceremony
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಪಾಲಕರ ಕನಸುಗಳನ್ನು ನನಸು ಮಾಡುವ ಹೊಣೆ ವಿದ್ಯಾರ್ಥಿಗಳದ್ದಾಗಿದೆ. ಹಾಗಾಗಿ ಕನಸುಗಳ ಸಾಕಾರಕ್ಕಾಗಿಅವರು ನಿರಂತರ ಪ್ರಯತ್ನವಾದಿಗಳಾಗಬೇಕು. ಕೇವಲ ಕನಸು ಕಾಣುವದಲ್ಲ, ಆ ಕನಸಿಗೆ ಸೃಷ್ಟಿರೂಪ ಕೊಡುವ ಮನೋಸ್ಥೈರ್ಯವಿರಲಿ ಎಂದು ಡಾ. ಅಬ್ದುಲ್‌ಅಜೀಜ ಮುಲ್ಲಾ ಅಭಿಪ್ರಾಯಪಟ್ಟರು.

Advertisement

ಸನ್ಮಾರ್ಗ ಕಾಲೇಜಿನಲ್ಲಿ ಜರುಗಿದ ಪ್ರಥಮ ಪಿಯು ವಿದ್ಯಾರ್ಥಿಗಳ ಸ್ವಾಗತ ಸಮಾರಂಭ ಹಾಗೂ ಕಾಲೇಜು ಸಂಸತ್ತಿನ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಸ್ಟೂಡೆಂಟ್ಸ್ ಎಜುಕೇಶನ್ ಸೊಸೈಟಿಯ ಚೇರಮನ್ ಪ್ರೊ. ರಾಜೇಶ ಕುಲಕರ್ಣಿ ಮಾತನಾಡಿ, ನಿಮ್ಮ ಜ್ಞಾನದ ಗುರಿಯನ್ನು ತಲುಪಿದಾಗ ನಿಮ್ಮ ಸಾಧನೆಯ ಸಾಕ್ಷಾತ್ಕಾರವಾಗುತ್ತದೆ. ಗುರಿ ಸಾಧನೆಗೆ ಅಚಲ ನಿರ್ಧಾರವಿರಲಿ ಎಂದರು.

ಪ್ರೊ. ರೋಹಿತ್ ಒಡೆಯರ್, ಪ್ರಾಚಾರ್ಯ ಪ್ರೊ. ಪ್ರೇಮಾನಂದ ರೋಣದ ಮಾತನಾಡಿದರು. ಸಮಾರಂಭದಲ್ಲಿ ಸಂಸ್ಥೆಯ ನಿದೇಶಕರಾದ ಪ್ರೊ. ಉಡುಪಿ ದೇಶಪಾಂಡೆ, ಪ್ರೊ. ಸೈಯದ್ ಮತೀನ್ ಮುಲ್ಲಾ, ಪ್ರೊ. ರಾಹುಲ್ ಒಡೆಯರ್ ಹಾಗೂ ಕಾಲೇಜಿನ ಆಡಳಿತಾಧಿಕಾರಿ ಎಮ್.ಸಿ. ಹಿರೇಮಠ ಉಪಸ್ಥಿತರಿದ್ದರು.

ಶ್ರದ್ಧಾ, ಹರ್ಷಿತಾ, ಸಂಜನಾ ಹಾಗೂ ನಯನಾ ಪ್ರಾರ್ಥಿಸಿದರು. ಪ್ರೊ. ಶ್ರೀಶುಭ ಗಣ್ಯರನ್ನು ಪರಿಚಯಿಸಿದರು. ಹಿರಿಯ ಉಪನ್ಯಾಸಕ ಪ್ರೊ. ಹೇಮಂತ ದಳವಾಯಿ ನೂತನವಾಗಿ ಆಯ್ಕೆಯಾದ ಕಾಲೇಜಿನ ಕಾರ್ಯದರ್ಶಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಪ್ರೊ.ಮುರಲೀಧರ ಸಂಕನೂರ ನಿರೂಪಿಸಿದರು. ಪ್ರೊ. ರಾಹುಲ್ ಒಡೆಯರ್ ವಂದಿಸಿದರು. ಕಾರ್ಯಕ್ರಮದಲ್ಲಿ ಎಲ್ಲ ಬೋಧಕ, ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Spread the love

LEAVE A REPLY

Please enter your comment!
Please enter your name here