ಬೆಂಗಳೂರು:- ಕಸ್ಟಮ್ಸ್ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ಕೆಂಪೇಗೌಡ ಏರ್ಪೋರ್ಟ್ನಲ್ಲಿ 2 ಕೋಟಿ ರೂ ವಿದೇಶಿ ಹಣ ಜಪ್ತಿ ಮಾಡಿದ್ದಾರೆ. ಅಲ್ಲದೇ ಮೂವರನ್ನು ಬಂಧಿಸಿ ತನಿಖೆಗೆ ಒಳಪಡಿಸಿದ್ದಾರೆ.
Advertisement
ಶ್ರೀಲಂಕಾ ಮೂಲದ ವಿಮಲ್ ರಾಜ್ ತುರೈ ಸಿಂಗಂ, ತಿಲೆಪನ್ ಜಯಂತಿ ಕುಮಾರ್, ಭಾರತದ ವೀರ ಕುಮಾರ್ ಬಂಧಿತರು. ಬ್ಯಾಗ್ನಲ್ಲಿಟ್ಟು ಹಣ ಸಾಗಿಸುವಾಗಿ ಆರೋಪಿಗಳು ಸಿಕ್ಕಿಬಿದಿದ್ದಾರೆ.
ಪ್ರಯಾಣಿಕರ ಲಗೇಜ್ ಬ್ಯಾಗ್ನಲ್ಲಿ ಹಣವಿಟ್ಟುಕೊಂಡು ಮೂವರು ಆರೋಪಿಗಳು ಹೋಗುತ್ತಿದ್ದರು. ಕೆಐಎಬಿಯಲ್ಲಿ ಇಮಿಗ್ರೇಷನ್ ಚೆಕ್ಕಿಂಗ್ ವೇಳೆ ಕಂತೆ ಕಂತೆ ಹಣ ಪತ್ತೆ ಆಗಿದೆ. ಹಣ ಕಂಡ ಏರ್ಪೋಟ್ ಭದ್ರತಾ ಪಡೆ ಐಟಿ ಮತ್ತು ಇಡಿ ಅಧಿಕಾರಿಗಳಿಗೆ ಹಣ ಸಮೇತ ಆರೋಪಿಗಳನ್ನ ಒಪ್ಪಿಸಿದ್ದಾರೆ. ಇದೀಗ ಇಡಿ ಅಧಿಕಾರಿಗಳಿಂದ ಮೂವರನ್ನು ಬಂಧಿಸಲಾಗಿದೆ.