ಕಲಾವಿದರಿಗೆ 2 ದಿನದ ಕಾರ್ಯಾಗಾರ

0
2 day workshop for artists
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತ ಸರಕಾರ ವಾರ್ತಾ ಮತ್ತು ಪ್ರಸಾರ ಮಂತ್ರಾಲಯ ಬೆಂಗಳೂರು ಇವರ ಆಶ್ರಯದಲ್ಲಿ ಹುಲಕೋಟಿಯ ಕೃಷಿ ವಿಜ್ಞಾನ ತರಬೇತಿ ಕೇಂದ್ರದಲ್ಲಿ ಕೇಂದ್ರ ಸಂವಹನ ಇಲಾಖೆ ಬೆಂಗಳೂರು ಇವರಿಂದ ಉತ್ತರ ಕರ್ನಾಟಕದ ನೋಂದಾಯಿತ 50 ಕಲಾ ತಂಡದ 250 ಕಲಾವಿದರಿಗೆ 2 ದಿನದ ಕಾರ್ಯಾಗಾರ ನೆರವೇರಿತು.

Advertisement

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಗದಗ ಜಿಲ್ಲಾ ಉಪನಿರ್ದೇಶಕರಾದ ಸ್ಪೂರ್ತಿ ಜಿ.ಎಸ್, ಕೇಂದ್ರ ಸಂವಹನ ಇಲಾಖೆಯ ನಿರ್ದೇಶಕರಾದ ಪಲ್ಲವಿ ಚಿನ್ಯಾ, ಉಪನಿರ್ದೇಶಕರಾದ ಜೈಕುಮಾರ, ಆರೋಗ್ಯ ಇಲಾಖೆಯ ಐಇಸಿ ವಿಭಾಗದ ಚವ್ಹಾಣ, ಧಾರವಾಡ ಆಕಾಶವಾಣಿ ಉದ್ಘೋಷಕರಾದ ಶಶಿಧರ ನರೇಂದ್ರ, ಸಂಪನ್ಮೂಲ ವ್ಯಕ್ತಿಗಳು ಉಪಸ್ಥಿತರಿದ್ದರು.

ಗದಗ ಜಿಲ್ಲಾ ಲೀಡ್ ಬ್ಯಾಂಕ್‌ನ ಮ್ಯಾನೇಜರ್ ಸಂತೋಷ ಎಂ.ವ್ಹಿ. ಬ್ಯಾಂಕಿನಿಂದ ಸರ್ಕಾರದಿಂದ ದೊರೆಯುವ ಸೌಲಭ್ಯಗಳು ಮತ್ತು ಅಪಘಾತ ವಿಮೆಯ ಕುರಿತು ಮಾಹಿತಿ ನೀಡಿದರು. ಹಿರಿಯ ಕಲಾವಿದರಾದ ಶಿವನಪ್ಪ ಚಂದರಗಿ, ಮಲ್ಲಮ್ಮ ಮ್ಯಾಗೇರಿ ಉಪಸ್ಥಿತರಿದ್ದರು.

ಎಸ್.ಎಸ್. ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ಶಂಕ್ರಪ್ಪ ಸಂಕಣ್ಣವರ ವಂದಿಸಿದರು.


Spread the love

LEAVE A REPLY

Please enter your comment!
Please enter your name here