ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶಿಗ್ಲಿ ಗ್ರಾಮದ ಶ್ರೀ ಶಾಖಾಂಬರಿದೇವಿ ದೇವಸ್ಥಾನದ ಸಮುದಾಯ ಭವನ ಕಟ್ಟಡ ನಿರ್ಮಾಣಕ್ಕೆ ಸಂಸ್ಥೆಯ ವತಿಯಿಂದ 2 ಲಕ್ಷ ರೂ ಮೊತ್ತದ ಡಿಡಿಯನ್ನು ತಾಲೂಕಾ ಯೋಜನಾಧಿಕಾರಿ ಪುನೀತ ಓಲೇಕಾರ ವಿತರಣೆ ಮಾಡಿದರು.
ನಂತರ ಮಾತನಾಡಿದ ಅವರು, ಸಂಸ್ಥೆಯ ವತಿಯಿಂದ ಸಮಾಜಮುಖಿ ಕೆಲಸಗಳನ್ನು ಮಾಡುವುದರ ಜೊತೆಗೆ ಮಹಿಳಾ ಸಬಲೀಕರ, ಧಾರ್ಮಿಕ ಆಚರಣೆಗಳ ಮಹತ್ವ, ಸಂಪ್ರದಾಯಗಳನ್ನು ಮುಂದಿನ ಪೀಳಿಗೆಗೆ ತಿಳಿಸುವ ಉದ್ದೇಶ ಹೊಂದಲಾಗಿದೆ ಎಂದರು.
ಕೊಪ್ಪಳ ಪ್ರಾದೇಶಿಕ ವಿಭಾಗದ ಸಿ.ಎಸ್.ಸಿ ಯೋಜನಾಧಿಕಾರಿ ನಾಗೇಶ ನಾಯಕ ಮಾತನಾಡಿ, ಸಿ.ಎಸ್.ಸಿ ಕಾರ್ಯಕ್ರಮದಲ್ಲಿ ಸರಕಾರ ಮಾಡುವ ಆಯುಷ್ಮಾನ ಕಾರ್ಡ್, ಇ-ಶ್ರಮ ಕಾರ್ಡ್, ಪಾನ್ ಕಾರ್ಡ್ ಸೇರಿದಂತೆ ಹಲವಾರು ಸೇವೆಗಳನ್ನು ಸ್ಥಳೀಯ ಸದಸ್ಯರ ಮನೆ ಬಾಗಿಲಿಗೆ ಹೋಗಿ ನೀಡುತ್ತೇವೆ. ಸದಸ್ಯರು ಇದರ ಉಪಯೋಗವನ್ನು ಪಡೆದುಕೊಳ್ಳಬೇಕೆಂದು ಮಾಹಿತಿ ನೀಡಿದರು.
ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ಫಕ್ಕೀರೇಶ ಮ್ಯಾಟೆಣ್ಣನವರ ಮಾತನಾಡಿ, ಸಮಾಜದ ಶ್ರೇಯೋಭಿವೃದ್ಧಿಗೆ ಡಾ. ವೀರೇಂದ್ರ ಹೆಗ್ಗಡೆಯವರು ಹತ್ತು ಹಲವರು ಕಾರ್ಯಕ್ರಮಗಳನ್ನು ಜಾರಿಗೊಳಿಸಿರುವುದು ಶ್ಲಾಘನೀಯ ಎಂದರು.
ದೇವಸ್ಥಾನದ ಅಧ್ಯಕ್ಷ, ಸುಭಾಷ ಹುಯಿಲಗೋಳ, ಮೇಲ್ವಿಚಾರಕ ನಾಮದೇವ ಸಾವಂತ, ದೇವಸ್ಥಾನ ಕಮಿಟಿ ಸದಸ್ಯರು, ಊರಿನ ಹಿರಿಯರು, ಸ್ವ-ಸಹಾಯ ಸಂಘದ ಸದಸ್ಯರು ಉಪಸ್ಥಿತರಿದ್ದರು.