ವಿಜಯಸಾಕ್ಷಿ ಸುದ್ದಿ, ಮುಳಗುಂದ : ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮೊದಲ ಪ್ರಾತ ವಹಿಸಿದ ವೀರ ಮಹಿಳೆ ಚನ್ನಮ್ಮಳ ದೇಶಪ್ರೇಮವನ್ನು ಇಂದಿನ ಮಕ್ಕಳ ಅಳವಡಿಸಿಕೊಳ್ಳಬೇಕು ಎಂದು ಪ್ರಧಾನ ಗುರು ಡಾ. ಎಸ್.ವಿ. ತಮ್ಮನಗೌಡ್ರ ಹೇಳಿದರು.
ಅವರು ಪಟ್ಟಣದ ಸರಕಾರಿ ಮಾದರಿ ಹೆಣ್ಣು ಮಕ್ಕಳ ಶಾಲೆಯಲ್ಲಿ ವೀರ ರಾಣಿ ಕಿತ್ತೂರ ಚನ್ನಮ್ಮನ 200ನೇ ಜಯಂತ್ಯುತ್ಸವದ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿ, ಇಂದು ನಾವೆಲ್ಲರೂ ಸ್ವತಂತ್ರ್ಯ ಭಾರತದಲ್ಲಿ ನೆಮ್ಮದಿ ಬದುಕು ನಡೆಸಲು ವೀರ ರಾಣಿ ಕಿತ್ತೂರ ಚನ್ನಮ್ಮನ ದೇಶಪ್ರೇಮ, ಧೈರ್ಯ, ಸಾಹಸ ಕಾರಣವಾಗಿದೆ. ಇಂತಹ ಮಹನೀಯರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕಾಗಿದೆ ಎಂದರು.
ಅಧ್ಯಕ್ಷತೆಯನ್ನು ಎಸ್‌ಡಿಎಂಸಿ ಅಧ್ಯಕ್ಷ ಮಾಹಾಂತೇಶ ಕಣವಿ, ಪ್ರಧಾನ ಗುರು ಡಾ. ಎಸ್.ವಿ. ತಮ್ಮನಗೌಡ್ರ, ಪಿ.ಎಸ್. ಮರಿದೇವರಮಠ, ಕೆ.ಎಸ್. ಗಾಣಿಗೇರ, ಆರ್.ಎಂ. ರೋಣದ, ಶೋಭಾ ಪಾಟೀಲ್, ಬಸಮ್ಮಾ ಲದ್ದಿ, ಮಾಹಾಂತೇಶ ಲಾಳಿ, ಶರಣಪ್ಪ ಕಮಾಜಿ ಇದ್ದರು.