HomeGadag Newsಕ್ರೀಡಾಕೂಟದಲ್ಲಿ ಬಾಲಕಿಯರ ಸಾಧನೆ

ಕ್ರೀಡಾಕೂಟದಲ್ಲಿ ಬಾಲಕಿಯರ ಸಾಧನೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಚಿಕ್ಕಹಂದಿಗೋಳ ಗ್ರಾಮದ ವೆಂಕಟೇಶ್ವರ ಪ್ರೌಢಶಾಲೆಯಲ್ಲಿ ಜರುಗಿದ 2024-25ನೇ ಸಾಲಿನ ಹೊಂಬಳ ವಲಯ ಮಟ್ಟದ ಪ್ರೌಢಶಾಲೆಗಳ ಕ್ರೀಡಾಕೂಟದಲ್ಲಿ ಹಿರೇಹಂದಿಗೋಳ ಗ್ರಾಮದ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕವಿತಾ ಕರಬಸಪ್ಪ ಕುರ್ತಕೋಟಿ 200 ಮೀಟರ್ ಓಟದಲ್ಲಿ ಪ್ರಥಮ, 800ಮೀ. ಓಟದಲ್ಲಿ ಪ್ರಥಮ ಹಾಗೂ 3000 ಮೀ. ಓಟದಲ್ಲಿ ಪ್ರಥಮ ಸ್ಥಾನವನ್ನು ಪಡೆದು ವೈಯಕ್ತಿಕ ವೀರಾಗ್ರಣಿ ಆಗಿ ಹೊರಹೊಮ್ಮಿದ್ದಾಳೆ.

ಗುಂಪು ಆಟಗಳಾದ ಕಬಡ್ಡಿ, ಥ್ರೋಬಾಲ್‌ನಲ್ಲಿ ಬಾಲಕಿಯರು ಪ್ರಥಮ ಸ್ಥಾನ ಗಳಿಸಿದರೆ, ಖೋ ಖೋ ಆಟದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ವಿವಿಧ ವೈಯಕ್ತಿಕ ಆಟದಲ್ಲಿ ವಿಜೇತರರಾಗಿ ತಾಲೂಕು ಮಟ್ಟಕ್ಕೆ ಆಯ್ಕೆಯಾಗಿ ಶಾಲೆಗೆ, ಗ್ರಾಮಕ್ಕೆ ಕೀರ್ತಿ ತಂದಿದ್ದಾರೆ.

ಕ್ರೀಡಾ ಪ್ರತಿಭೆಗಳಿಗೆ ಹಾಗೂ ತರಬೇತಿ ನೀಡಿದ ದೈಹಿಕ ಶಿಕ್ಷಣ ಶಿಕ್ಷಕಿ ಕೆ.ವಿ. ಚೂರಿ ಅವರಿಗೆ ಗ್ರಾಮದ ಪಂಚಲಿಂಗೇಶ್ವರ ಸಧ್ಭಕ್ತ ಮಂಡಳಿ ಹಾಗೂ ಕ್ರೀಡಾಭಿಮಾನಿಗಳ ವತಿಯಿಂದ ಪಂಚಲಿಂಗೇಶ್ವರ ದೇವಾಲಯದಲ್ಲಿ ಸನ್ಮಾನಿಸಿ, ಗೌರವಿಸುವ ಮೂಲಕ ಶುಭ ಹಾರೈಯಿಸಲಾಯಿತು.

ಈ ಸಂದರ್ಭದಲ್ಲಿ ಬಿಂಕದಕಟ್ಟಿ ಗ್ರಾಂ.ಪಂ ಉಪಾಧ್ಯಕ್ಷೆ ದ್ಯಾಮವ್ವ ಹನಮಪ್ಪ ಆರಟ್ಟಿ, ರತ್ನಾ ಹೂಗಾರ, ವಿದ್ಯಾ ಅನವಾಲದ, ಲಕ್ಷೀ ಕುರ್ತಕೋಟಿ, ಭವ್ಯಾ ಹೂಗಾರ, ಸುವರ್ಣಾ ಕುರ್ತಕೋಟಿ, ಯಶವಂತಗೌಡ ಪಾಟೀಲ, ಕರಬಸಪ್ಪ ಕುರ್ತಕೋಟಿ, ವಿನಾಯಕಗೌಡ ಕರಿಗೌಡ್ರ, ಶ್ರೀಧರ ಹೂಗಾರ, ಮುದಕಪ್ಪ ಮಡಿವಾಳರ ಉಪಸ್ಥಿತರಿದ್ದರು. ಮುತ್ತಣ್ಣ ಹೂಗಾರ ಕಾರ್ಯಕ್ರಮ ನಿರೂಪಿಸಿದರೆ, ಶಿವಶಂಕರಪ್ಪ ಆರಟ್ಟಿ ವಂದಿಸಿದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!