ಕೆಂಪೇಗೌಡ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳು ರದ್ದು!

0
Spread the love

ಬೆಂಗಳೂರು:- ಕೆಂಪೇಗೌಡ ವಿಮಾನ ನಿಲ್ದಾಣದಿಂದ ತೆರಳಬೇಕಿದ್ದ 21 ಇಂಡಿಗೋ ವಿಮಾನಗಳು ರದ್ದಾಗಿದೆ.

Advertisement

ವಿಶ್ವದಾದ್ಯಂತ ಮೈಕ್ರೋಸಾಫ್ಟ್​ನಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಹೀಗಾಗಿ ವಿಮಾನ ಸಂಚಾರದಲ್ಲಿ, ರೈಲು ಸಂಚಾರದಲ್ಲಿ, ಬ್ಯಾಂಕಿಂಗ್, ಷೇರು ಪೇಟೆಯ ವಹಿವಾಟಿನ ಮೇಲೆ ಪರಿಣಾಮ ಬೀರಿದೆ.

ಹೀಗಾಗಿ ಅಕ್ಷರಶಃ ಪ್ರಯಾಣಿಕರು ಪರದಾಡಿದ್ದಾರೆ. ಈ ಬಗ್ಗೆ ಏರ್‌ಲೈನ್ಸ್‌ ಸಿಬ್ಬಂದಿ ಸೇರಿದಂತೆ ಯಾರೊಬ್ಬರೂ ಸ್ಪಂದಿಸುತ್ತಿಲ್ಲವೆಂದು ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಂಡಿಗೋ ಏರ್‌ಲೈನ್ಸ್‌ ಕಚೇರಿಯಲ್ಲಿ ಮಾಹಿತಿ ಪಡೆಯಲು ಗಂಟೆಗಟ್ಟಲೇ ಕ್ಯೂ ನಿಲ್ಲಬೇಕಾಗಿದ್ದು, ಯಾವ ಫ್ಲೈಟ್ ರದ್ದಾಗಿದೆ, ಯಾವುದು ಸಿದ್ಧವಿದೆ ಎಂಬ ಬಗ್ಗೆ ಮಾಹಿತಿ ಕೂಡ ಕೊಡಿಲ್ಲವಂತೆ. ಹಾಗಾಗಿ ಇಂಡಿಗೋ ಏರ್‌ಲೈನ್ಸ್‌ ಸಿಬ್ಬಂದಿಯ ವಿರುದ್ಧ ಪ್ರಯಾಣಿಕರು ಗರಂ ಆಗಿದ್ದಾರೆ.


Spread the love

LEAVE A REPLY

Please enter your comment!
Please enter your name here