ನೆಲಮಂಗಲ:- ನೆಲಮಂಗಲ ತಾಲೂಕಿನ ಚಿಕ್ಕಮಾರನಹಳ್ಳಿ ಬಳಿ ರೈಲಿಗೆ ಸಿಲುಕಿ 24 ಮೇಕೆಗಳು ಭೀಕರವಾಗಿ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
ರೈತ ವೆಂಕಟಪ್ಪ ಅವರಿಗೆ ಸೇರಿದ್ದ 24 ಮೇಕೆಗಳು ಇಂದು ಸಂಜೆ ಸಾವನ್ನಪ್ಪಿವೆ. ಸಂಜೆ ರೈಲೊಂದು ಹಾಸನದಿಂದ ಬೆಂಗಳೂರಿಗೆ ಬರುತ್ತಿತ್ತು. ಇದೇ ವೇಳೆ ಮಳೆ ಬಂದಿದ್ದಕ್ಕೆ ರೈಲು ಹಳಿಯ ಮೇಲೆ ಮೇಕೆಗಳ ದಂಡು ಓಡಿ ಹೋಗಿದೆ.
ಪರಿಣಾಮ ಬರುತ್ತಿದ್ದ ರೈಲಿಗೆ ಸಿಲುಕಿ 4 ಲಕ್ಷ ರೂ. ಮೌಲ್ಯದ 24 ಮೇಕೆಗಳು ದಾರುಣವಾಗಿ ಸಾವನ್ನಪ್ಪಿವೆ. ಘಟನೆಯಿಂದ ರೈತ ಕಂಗಾಲಾಗಿದ್ದಾರೆ.