ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ
ರಾಜ್ಯ ಸರ್ಕಾರ ಮಾಧ್ಯಮ ಕ್ಷೇತ್ರದಲ್ಲಿ ಕರ್ತವ್ಯ ನಿರ್ವಹಿಸುವವರನ್ನು ಫ್ರೆಂಟ್ ಲೈನ್ ವಾರಿಯರ್ಸ್ ಎಂದು ಪರಿಗಣಿಸಿ ಆಧ್ಯತೆ ಮೇರೆಗೆ ಕೋವಿಡ್ ಲಸಿಕೆಯನ್ನು ನೀಡಲು ಅನುಮತಿಸಿದೆ. ಈ ಹಿನ್ನಲೆಯಲ್ಲಿ ಧಾರವಾಡ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರ ನಿರ್ದೇಶನದ ಮೇರೆಗೆ ಹುಬ್ಬಳ್ಳಿಯ ಪತ್ರಕರ್ತರ ಭವನದಲ್ಲಿ ಕೋವಿಡ್ ಲಸಿಕಾ ಅಭಿಯಾನ ಹಮ್ಮಿಕೊಳ್ಳಲಾಗಿತ್ತು.
240 ಮಾಧ್ಯಮ ಪ್ರತಿನಿಧಿಗಳು ಲಸಿಕೆಯನ್ನು ಪಡೆದುಕೊಂಡರು.
18 ರಿಂದ 45 ವಯೋಮಾನದ ಒಳಗಿನ 196 ಹಾಗೂ 45 ವಯೋಮಾನ ಮೇಲ್ಪಟ್ಟ 44 ಜನರಿಗೆ ಅಸ್ಟ್ರಜನಿಕಾ ಕೋವಿಶೀಲ್ಡ್ ಲಸಿಕೆ ನೀಡಲಾಯಿತು. ವಿದ್ಯುನ್ಮಾನ ಮಾಧ್ಯಮ ಕೆಲಸ ನಿರ್ವಹಿಸುವ ವರದಿಗಾರರು, ವಿಡಿಯೋ ಜರ್ನಲಿಸ್ಟ್, ಮುದ್ರಣ ಮಾಧ್ಯಮದ ವರದಿಗಾರರು, ಉಪಸಂಪಾದಕರು, ಪೋಟೊ ಜರ್ನಲಿಸ್ಟ್ ಹಾಗೂ ವಾರ್ತಾ ಇಲಾಖೆ ಸಿಬ್ಬಂದಿ ಲಸಿಕೆ ಪಡೆದುಕೊಂಡರು.
ಚಿಟಗುಪ್ಪಿ ವೈದ್ಯಾಧಿಕಾರಿಗಳಾದ ಶ್ರೀಧರ ದಂಡಪ್ಪನವರ ಹಾಗೂ ಪ್ರಕಾಶ್ ನರಗುಂದ ಲಿಸಿಕೆ ಅಭಿಯಾನದ ಮೇಲು ಉಸ್ತುವಾರಿ ವಹಿಸಿದ್ದರು. ವೈದ್ಯಕೀಯ ಸಿಬ್ಬಂದಿಗಳಾದ ಆಶಾ ಯಡಳ್ಳಿ, ಕಾವ್ಯ ಗೊರವನಗೋಳ್, ಪ್ರವೀಣ್ ಎಸ್.ಎಮ್. ಮಲ್ಲಿಕಾರ್ಜುನ ಎನ್.ಎಮ್, ಪವಿತ್ರ ಎಸ್, ಶ್ವೇತಾ, ಲಸಿಕೆ ಕಾರ್ಯವನ್ನು ನಿರ್ವಹಿಸಿದರು.