ಕಾರವಾರ;- ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರು, ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರುತ್ತಿರುವ 26 ಜನರ ಅರ್ಜಿ ನನ್ನ ಬಳಿಯಿದೆ ಎಂದು ಹೇಳಿದ್ದಾರೆ.ಈ ಸಂಬಂಧ ಅಂಕೋಲದಲ್ಲಿ ಮಾತನಾಡಿದ ಅವರು, ಬಿಜೆಪಿಯಿಂದ ಕಾಂಗ್ರೆಸ್‌ಗೆ ಬರಲು ಸಜ್ಜಾಗಿ 26 ಜನ ಅರ್ಜಿ ಹಾಕಿದ್ದಾರೆ. ಆ ಅರ್ಜಿಗಳೆಲ್ಲವೂ ನನ್ನ ಬಳಿಯಿದೆ. ಅವರೆಲ್ಲರೂ ಕಾಂಗ್ರೆಸ್‌ಗೆ ಬರೋದು ಖಚಿತ. ಸೂಕ್ತ ಸಮಯದಲ್ಲಿ ಯಾರು ಬರುತ್ತಾರೆ ಎಂಬುದು ಗೊತ್ತಾಗಲಿದೆ.
ಕಾಂಗ್ರೆಸ್ ಶಾಸಕರು ಬಿಜೆಪಿಗೆ ಹೋಗಿ ಏನು ಮಾಡಬೇಕಿದೆ? ಬಿಜೆಪಿಗೆ ಸರ್ಕಾರ ನಡೆಸುವ ಶಕ್ತಿ ಇಲ್ಲ. ಅಲ್ಲಿಗೆ ಹೋಗಿ ಸರ್ಕಾರ ಮಾಡಲು ಸಾಧ್ಯವೇ? ಯಾರೂ ಹೋಗುವುದಿಲ್ಲ, ಕಾಂಗ್ರೆಸ್ ದಿನೇ ದಿನೇ ಬಲಿಷ್ಠವಾಗುತ್ತಿದೆ. ಅದಕ್ಕಾಗಿ ಬಿಜೆಪಿಯ ಪ್ರಮುಖ ನಾಯಕರೇ ಕಾಂಗ್ರೆಸ್‌ನತ್ತ ಮುಖ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ರಾಜ್ಯ ಸರ್ಕಾರದ ಸಂಪುಟ ವಿಸ್ತರಣೆಗೆ ಸಂಬಂಧಿಸಿದಂತೆ ಮಾತನಾಡಿ, ಅದು ಮುಖ್ಯಮಂತ್ರಿಗೆ ಬಿಟ್ಟ ವಿಚಾರ. ನಾನು ಶಾಸಕನಾಗಿ ಇದ್ದರೆ ತಪ್ಪಿಲ್ಲ, ಇಷ್ಟು ವರ್ಷ ಸಚಿವನಾಗಿ ಕಾರ್ಯ ನಿರ್ವಹಿಸಿದ್ದೇನೆ, ನಾನು ಸುಖವಾಗಿದ್ದೇನೆ. ನಾನು ಲೋಕಸಭೆಗೆ ಸ್ಪರ್ಧೆ ಸಹ ಮಾಡುವುದಿಲ್ಲ. ನನ್ನ ಮಕ್ಕಳು ಸಹ ಸ್ಪರ್ಧೆ ಮಾಡುವುದಿಲ್ಲ. ಸದ್ಯ ನಾನು ವಿಶ್ರಾಂತಿ ಕಣದಲ್ಲಿದ್ದೇನೆ ಎಂದು ತಿಳಿಸಿದ್ದಾರೆ.