ಹಳಕಟ್ಟಿಯವರು ಮಹಾನ್ ಶರಣರು : ಸಿದ್ಧರಾಮ ಶ್ರೀಗಳು

0
2700th Shivanubhava program of Lingayat Progressive Association
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಡಾ. ಫ.ಗು. ಹಳಕಟ್ಟಿಯವರು ತಮ್ಮ ಇಡೀ ಬದುಕನ್ನೇ ವಚನ ಸಾಹಿತ್ಯದ ಸಂಶೋಧನೆಗಾಗಿ, ಸಮಾಜದ ಸೇವೆಗಾಗಿ ಸಮರ್ಪಿಸಿಕೊಂಡಿದ್ದಾರೆ. ಹಳಕಟ್ಟಿಯವರು ಮಹಾನ್ ಶರಣರು ಎಂದು ಡಾ. ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ನುಡಿದರು.

Advertisement

ಲಿಂಗಾಯತ ಪ್ರಗತಿಶೀಲ ಸಂಘದ 2700ನೇ ಶಿವಾನುಭವ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿದ ಶ್ರೀಗಳು, ಹಳಕಟ್ಟಿಯವರು 12ನೇ ಶತಮಾನದ ಬಸವಾದಿ ಶರಣರ ಪ್ರತಿರೂಪ ಅಂದರೆ ಅತಿಶಯೋಕ್ತಿಯಲ್ಲ.

ಹಳಕಟ್ಟಿಯವರು ಭೌತಿಕ ಸಂಪತ್ತಿನ ಕಡೆಗೆ ಗಮನಹರಿಸದೇ ಅಮೂಲ್ಯವಾಗಿರುವ ವಚನಸಾಹಿತ್ಯವನ್ನು ಉಳಿಸಿ, ಬೆಳೆಸಿ ಈ ಸಮಾಜದಲ್ಲಿ ಚಿರಸ್ಥಾಯಿಯಾಗಿರುವ ಸ್ಥಾನವನ್ನು ಪಡೆದರು. ಬಸವಾದಿ ಶಿವಶರಣರ ತತ್ವಗಳ ಬಗ್ಗೆ, ಆದರ್ಶಗಳ ಬಗ್ಗೆ ತಿಳಿಸಿಕೊಟ್ಟವರು ಡಾ. ಫ.ಗು. ಹಳಕಟ್ಟಿಯವರು. ವಚನಗಳನ್ನು ಸಂಶೋಧಿಸಿ ಪ್ರಕಟಿಸಿದ್ದಲ್ಲದೇ, ಸ್ವತಃ ವಚನಗಳಲ್ಲಿರುವ ಆದರ್ಶಗಳನ್ನು ತಮ್ಮ ಬದುಕಿನಲ್ಲಿ ಅಳವಡಿಕೊಂಡು ಮಾದರಿಯಾಗಿದ್ದಾರೆ ಎಂದು ಮಾತನಾಡಿದರು.

ವಿಜಯಪುರದ ಡಾ. ಎಂ.ಎಸ್. ಮದಭಾವಿ ಉಪನ್ಯಾಸ ನೀಡಿ, 12ನೇ ಶತಮಾನದ ಬಸವಾದಿ ಶಿವಶರಣರನ್ನು ನಾವು ಯಾರೂ ಕಂಡಿಲ್ಲ. ಫ.ಗು. ಹಳಕಟ್ಟಿಯವರು 12ನೇ ಶತಮಾನದ ವಚನ ಸಾಹಿತ್ಯವನ್ನು ಸಂಗ್ರಹಿಸಿ, ಶೋಧಿಸಿ ನಾಡಿನಾದ್ಯಂತ ಪರಿಚಯಿಸಿದ್ದಾರೆ. ಕನ್ನಡ ಸಾಹಿತ್ಯದ ಒಂದು ಶ್ರೇಷ್ಠ ಆಯಾಮಕ್ಕೆ ಇಡೀ ತಮ್ಮ ಬದುಕನ್ನೇ ಸಮರ್ಪಿಸಿಕೊಂಡಿದ್ದಾರೆ ಎಂದು ಹೇಳಿದರು.

ಮೃತ್ಯುಂಜಯ ಹಿರೇಮಠ ಹಾಗೂ ಗುರುನಾಥ ಸುತಾರ ವಚನಸಂಗೀತ ಹಾಡಿದರು. ಧರ್ಮಗ್ರಂಥ ಪಠಣವನ್ನು ಕು. ಅಮರಸಿಂಗ ಹೇಮಸಿಂಗ ರಜಪೂತ, ವಚನ ಚಿಂತನೆಯನ್ನು ಕು. ಪ್ರತೀಕ್ಷಾ ಹೇಮಸಿಂಗ ರಜಪೂತ ಇವರು ಮಾಡಿದರು. ಶಿವಾನುಭವದ ದಾಸೋಹ ಭಕ್ತಿಸೇವೆಯನ್ನು ವಹಿಸಿಕೊಂಡಿದ್ದ ಬಸಯ್ಯ ಚನ್ನಬಸಯ್ಯ ಮಠದ ಹಾಗೂ ಪರಿವಾರ ಹುಬ್ಬಳ್ಳಿ ಅವರನ್ನು ಪೂಜ್ಯರು ಸಂಮಾನಿಸಿದರು.

ಸರ್ವರನ್ನು ಲಿಂಗಾಯತ ಪ್ರಗತಿಶೀಲ ಸಂಘದ ಅಧ್ಯಕ್ಷರಾದ ಶೇಖಣ್ಣ ಕಳಸಾಪೂರ ಸ್ವಾಗತಿಸಿದರು. ರತ್ನಕ್ಕ ಪಾಟೀಲ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಬಾಲಚಂದ್ರ ಭರಮಗೌಡರ, ರೇಣುಕಾ ವಿ.ಕರೇಗೌಡ್ರ, ಕಾರ್ಯದರ್ಶಿ ಮಹೇಶ ಗಾಣಿಗೇರ, ಸಹಕಾರ್ಯದರ್ಶಿ ವಿಜಯಕುಮಾರ ಹಿರೇಮಠ, ವಿರುಪಾಕ್ಷಪ್ಪ ಅರಳಿ, ಸಂಘಟನಾ ಕಾರ್ಯದರ್ಶಿ ಅಶೋಕ ಹಾದಿ, ಕೋಶಾಧ್ಯಕ್ಷ ಸುರೇಶ ನಿಲೂಗಲ್, ಶಿವಾನುಭವ ಸಮಿತಿ ಚೇರಮನ್‌ರಾದ ವಿವೇಕಾನಂದಗೌಡ ಪಾಟೀಲ ಉಪಸ್ಥಿತರಿದ್ದರು.

ನಾಗರಿಕರ ಜೀವ ಹಾಗೂ ಆಸ್ತಿ ಸಂರಕ್ಷಣಾ ಸೇವೆಗೆ ಮುಖ್ಯಮಂತ್ರಿಯವರ ಚಿನ್ನದ ಪದಕ ಪಡೆದ ನಿಮಿತ್ತ ಗೃಹರಕ್ಷಕದಳದ ಸಮಾದೇಷ್ಠರಾದ ವಿಶ್ವನಾಥ ಸಿ.ಯಳಮಲಿ ಅವರನ್ನು ಪೂಜ್ಯರು ಸಂಮಾನಿಸಿದರು. ಲಿಂಗಾಯತ ಪ್ರಗತಿಶೀಲ ಸಂಘದ ನೂತನ ಆಜೀವ ಸದಸ್ಯರಿಗೆ ಪ್ರಮಾಣ ವಚನ ಸ್ವೀಕಾರ ಜರುಗಿತು.


Spread the love

LEAVE A REPLY

Please enter your comment!
Please enter your name here