ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ವಿನಾಯಕ ನಗರದ ವಿನಾಯಕ ನಗರ ಅಭಿವೃದ್ಧಿ ಸಮಿತಿಯಿಂದ ಪ್ರತಿಷ್ಠಾಪನೆಗೊಂಡ ಗಣೇಶ ಮೂರ್ತಿಯ 2ನೇ ವರ್ಷದ ವಾರ್ಷಿಕೋತ್ಸವ ಸಂಗೀತ, ನೃತ್ಯ, ಸಾಂಸ್ಕೃತಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ಜರುಗಿದವು.
ಅತಿಥಿಗಳಾಗಿ ಪಾಲ್ಗೊಂಡಿದ್ದ ಪಿಎಸ್‌ಐ ಈರಪ್ಪ ರಿತ್ತಿ ಮಾತನಾಡಿ, ಹಬ್ಬಗಳು ನಮ್ಮ ಸಂಸ್ಕೃತಿಯ ಪ್ರತೀಕವಾಗಿವೆ. ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗಿರುವ ಇಂದಿನ ಯುವ ಜನಾಂಗ ನಮ್ಮ ಸಂಸ್ಕೃತಿ ಸಂಪ್ರದಾಯಗಳನ್ನು ಮರೆಯುತ್ತಿರುವದು ವಿಷಾದದ ಸಂಗತಿಯಾಗಿದೆ. ಗಣೇಶನ ಹಬ್ಬಕ್ಕೆ ಇರುವ ಹಿನ್ನೆಲೆಯನ್ನು ಮಕ್ಕಳಿಗೆ ತಿಳಿಸಿಕೊಡುವ ಅರ್ಥಪೂರ್ಣವಾದ ಕಾರ್ಯಕ್ರಮಗಳು ಮೂಡಿಬರಬೇಕಾಗಿದೆ. ಗಣೇಶ ಮಂಡಳಿಗಳು ಭಾರತಿಯ ಸಂಸ್ಕೃತಿಯನ್ನು ಬೆಳೆಸುವ ಮೂಲಕ ಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಿ ಎಂದು ಸಲಹೆ ನೀಡಿದರು.
ಪುರಸಭೆ ಸದಸ್ಯ ಪ್ರವೀಣ ಬಾಳಿಕಾಯಿ, ಉದ್ಯಮಿ ಲೋಹಿತ ನೆಲವಗಿ ಮಾತನಾಡಿದರು. ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷೆ ಯಲ್ಲವ್ವ ದುರಗಣ್ಣವರ, ಉಪಾಧ್ಯಕ್ಷ ಫಿರ್ದೋಷ ಆಡೂರ, ವಿನಾಯಕ ನಗರ ಅಭಿವೃದ್ಧಿ ಸಮಿತಿ ಗೌರವಾಧ್ಯಕ್ಷ ಚಂಬಣ್ಣ ಬಾಳಿಕಾಯಿ, ಅಧ್ಯಕ್ಷ ಮಂಜುನಾಥ ಹೊಗೆಸೊಪ್ಪಿನ, ಮುಖ್ಯಾಧಿಕಾರಿ ಮಹೇಶ ಹಡಪದ, ವಿಜಯ ಹತ್ತಿಕಾಳ, ಜವಾಹರಸಾ ಪವಾರ, ಸರೋಜಕ್ಕ ಬನ್ನೂರ ಇದ್ದರು.
ಈ ಸಂದರ್ಭದಲ್ಲಿ ಸತೀಶ ಪಾಟೀಲ್, ಜಗದೀಶ ಆಚಾರಿ, ಎಮ್‌ಎಮ್. ಎಲಿಮಠ, ರುದ್ರುಮುನಿ ಗಂಟಾಮಠ, ರವಿ ಬೋಮಲೆ, ವಿಠ್ಠಲ್ ಬದಿ, ಸತ್ಯೇಂದ್ರ ಸಬಾವಡಿಮಠ, ಡಾ. ಶಿದ್ದಪ್ಪ ನೇಕಾರ, ಭರತ ಜೈನ, ರಂಗಣ್ಣ ಬದಿ, ಮಂಜುನಾಥ ಕೊಡ್ಲಿ, ಮಂಜುನಾಥ ಉಮಚಗಿ ಮತ್ತಿತರರು ಹಾಜರಿದ್ದರು. ವೀರಭದ್ರಯ್ಯ ಹಿರೇಮಠ, ಅನ್ನಪೂರ್ಣೇಶ್ವರಿ ಹಿರೇಮಠ, ವೀರೇಶ ಸಾಸಲವಾಡ, ರಾಘವೇಂದ್ರ ಕಡೆಮನಿ ನಿರೂಪಿಸಿದರು.