ರಾಯಚೂರು: ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ನಡೆದ ಹುಂಡಿ ಎಣಿಕೆ ಕಾರ್ಯದಲ್ಲಿ ಕಳೆದ 21 ದಿನಗಳಲ್ಲಿ ಒಟ್ಟು ₹3.06 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹವಾಗಿದೆ.
ನವೆಂಬರ್–ಡಿಸೆಂಬರ್ ತಿಂಗಳ 21 ದಿನಗಳ ಅವಧಿಯಲ್ಲಿ ಒಟ್ಟು ₹3,06,81,661 ಕಾಣಿಕೆ ದಾಖಲಾಗಿದೆ. ಇದರಲ್ಲಿ ₹2,97,44,661 ಕರೆನ್ಸಿ ನೋಟುಗಳು ಮತ್ತು ₹9,37,000 ನಾಣ್ಯಗಳಿವೆ. ಜೊತೆಗೆ 23 ಗ್ರಾಂ ಚಿನ್ನ ಹಾಗೂ 490 ಗ್ರಾಂ ಬೆಳ್ಳಿ ಕಾಣಿಕೆ ರೂಪದಲ್ಲಿ ಹರಿದು ಬಂದಿದೆ. ಮಠದ ನೂರಾರು ಸಿಬ್ಬಂದಿ, ಭಜನಾ ಮಂಡಳಿ ಹಾಗೂ ಕರಸೇವಕರು ಭಾಗವಹಿಸಿದ್ದ ಈ ಎಣಿಕೆ ಕಾರ್ಯ ಮುಕ್ತಾಯಗೊಂಡಿತು.



