HomeIndia Newsಕೊರೋನಾಗೆ 3 ಬಲಿ..! ದೇಶದಲ್ಲಿ ಒಟ್ಟು ಎಷ್ಟು ಕೋವಿಡ್ ಕೇಸ್ ಪತ್ತೆ ಆಗಿವೆ.?

ಕೊರೋನಾಗೆ 3 ಬಲಿ..! ದೇಶದಲ್ಲಿ ಒಟ್ಟು ಎಷ್ಟು ಕೋವಿಡ್ ಕೇಸ್ ಪತ್ತೆ ಆಗಿವೆ.?

For Dai;y Updates Join Our whatsapp Group

Spread the love

ನವದೆಹಲಿ: ಕರ್ನಾಟಕ ಮಾತ್ರವಲ್ಲ ದೇಶದ ಕೆಲವು ರಾಜ್ಯಗಳಲ್ಲಿ ಕೋವಿಡ್​ ಉಲ್ಬಣಗೊಳ್ಳುತ್ತಿದೆ. ಈಗಾಗಲೇ ದೇಶದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 7,154 ಕ್ಕೆ ಏರಿದೆ. ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ಪ್ರಕಾರ.. ಕೇರಳ ರಾಜ್ಯದಲ್ಲಿ ಅತಿ ಹೆಚ್ಚು ಸಕ್ರಿಯ ಪ್ರಕರಣಗಳು 2,165 ಇವೆ.

ಇದರ ನಂತರ ಗುಜರಾತ್‌ನಲ್ಲಿ 1,281, ಪಶ್ಚಿಮ ಬಂಗಾಳದಲ್ಲಿ 747, ದೆಹಲಿಯಲ್ಲಿ 731, ಮಹಾರಾಷ್ಟ್ರದಲ್ಲಿ 615, ಕರ್ನಾಟಕದಲ್ಲಿ 467, ಉತ್ತರ ಪ್ರದೇಶದಲ್ಲಿ 231 ಮತ್ತು ಉತ್ತರ ಪ್ರದೇಶದಲ್ಲಿ 227 ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ ಮೂರು ಸಾವುಗಳು ಸಂಭವಿಸಿವೆ. 117 ಜನರಲ್ಲಿ ಸೋಂಕು ದೃಢಪಟ್ಟಿದೆ.  ಮಹಾರಾಷ್ಟ್ರದಲ್ಲಿ ಎರಡು ಮತ್ತು ಮಧ್ಯಪ್ರದೇಶದಲ್ಲಿ ಒಂದು ಸಾವು ಸಂಭವಿಸಿದೆ. ಇದರೊಂದಿಗೆ, ಈ ವರ್ಷ ಇಲ್ಲಿಯವರೆಗೆ ಕೊರೊನಾದಿಂದ ಸಾವನ್ನಪ್ಪಿದವರ ಸಂಖ್ಯೆ 77 ಕ್ಕೆ ಏರಿದೆ. ಇಲ್ಲಿಯವರೆಗೆ, 9,556 ಜನರು ಕೊರೊನಾದಿಂದ ಚೇತರಿಸಿಕೊಂಡಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!