ಗದಗ:- ಸರ್ಕಾರಿ ಬಸ್ ಹರಿದು 30 ಕುರಿಗಳು ಸಾವನ್ನಪ್ಪಿದ ಘಟನೆ ಗಜೇಂದ್ರಗಡ-ರೋಣ ರಸ್ತೆ ಮಾರ್ಗದ ದಿಂಡೂರ ಗ್ರಾಮದ ಕ್ರಾಸ್ ನಲ್ಲಿ ಜರುಗಿದೆ.
Advertisement
ಓವರ್ ಟೆಕ್ ಮಾಡಲು ಹೋಗಿ ಮೂವತ್ತು ಕುರಿಗಳ ಮೇಲೆ ಚಾಲಕ ಹರಿಸಿದ್ದಾನೆ. ಬದಾಮಿ ಘಟಕದ ಸರ್ಕಾರಿ ಬಸ್ ಚಾಲಕನ ನಿರ್ಲಕ್ಷ್ಯದಿಂದ ಘಟನೆ ಜರುಗಿದೆ.
ಸುಮಾರು 4.5 ಲಕ್ಷ ಮೌಲ್ಯದ ಕುರಿಗಳು ಸಾವನ್ನಪ್ಪಿದ್ದು, ಕುರಿಗಳನ್ನು ಕಳೆದುಕೊಂಡ ಕುರಿಗಾಹಿಗಳ ಗೋಳಾಟ ಮನಕಲಕುವಂತಿದೆ.