ಹಾಸನ:- ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಬೆಳಗೋಡು ಗ್ರಾಮದಲ್ಲಿ ಶ್ವಾಸಕೋಶದಿಂದ ಬಳಲುತ್ತಿದ್ದ 30ರ ಬಾಡಿಬಿಲ್ಡರ್ ಸಾವನ್ನಪ್ಪಿರುವ ಘಟನೆ ಜರುಗಿದೆ.
Advertisement
30 ವರ್ಷದ ಸೋಮಶೇಖರ್ ಮೃತ ದುರ್ದೈವಿ. ಜಿಮ್ ಸೋಮ ಎಂದೇ ಖ್ಯಾತಿಯಾಗಿದ್ದ ಯುವಕ ಸೋಮಶೇಖರ್ ಆರೂವರೆ ಅಡಿ ಎತ್ತರ, 110 ಕೆಜಿ ತೂಕವಿದ್ದರು. ಬಾಡಿಬಿಲ್ಡಿಂಗ್‌ನಲ್ಲಿ ಹಲವಾರು ಟೈಟಲ್ ಜಯಿಸಿದ್ದ ಸೋಮ ರಾಷ್ಟ್ರಮಟ್ಟದ ದೇಹದಾರ್ಢ್ಯ ಸ್ಪರ್ಧೆಗೆ ಸಿದ್ಧತೆ ನಡೆಸುತ್ತಿದ್ದರು.
ಒಂದು ವಾರದಿಂದ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದು, ಭಾನುವಾರ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದು ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಮೃತಪಟ್ಟಿದ್ದಾರೆ.