ವಿಜಯಸಾಕ್ಷಿ ಸುದ್ದಿ, ರೋಣ : ಇಲ್ಲಿನ ತಾಲೂಕು ಪತ್ತಿನ ಸಹಕಾರ ಸಂಘ ಹಾಗೂ ರೋಣ ತಾಲೂಕಾ ಬಣಜಿಗ ಸಮಾಜದ 30ನೇ ವಾರ್ಷಿಕ ಸಭೆಯು ರೋಣ ನಗರದ ಕಸಾಪ ಭವನದಲ್ಲಿ ಜರುಗಿತು. ಸಭೆಯನ್ನು ವಿಧಾನ ಪರಿಷತ್ ಮಾಜಿ ಸಬಾಪತಿ ವೀರಣ್ಣನವರು ಮತ್ತಿಕಟ್ಟಿ ಉದ್ಘಾಟಿಸಿ ಮಾತನಾಡಿ, ಸಮಾಜ ಮತ್ತು ಸೊಸೈಟಿ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಸಂಸ್ಥೆಯನ್ನು ಬೆಳೆಸಿಕೊಂಡು ಹೋಗುತ್ತಿರುವದಕ್ಕೆ ಶುಭ ಹಾರೈಸಿ ಸಂತೋಷ ವ್ಯಕಪಡಿಸಿದರು.
ಸಭೆಯ ಅಧ್ಯಕ್ಷತೆಯನ್ನು ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಸೋಮು ಚರೇದ ವಹಿಸಿದ್ದರು. ಬಣಜಿಗ ಸಮಾಜದ ಅಧ್ಯಕ್ಷ ಮುತ್ತಣ್ಣ ಸಂಗಳದ, ಅಖಿಲ ಭಾರತ ವೀರಶೈವ ಮಹಾಸಭಾದ ರಾಜ್ಯ ಸಮಿತಿಗೆ ಸದಸ್ಯರಾಗಿ ಆಯ್ಕೆಯಾದ ಮಿಥುನಗೌಡ್ರ ಜಿ.ಪಾಟೀಲ, ರೋಣ ಪುರಸಭೆ ನಾಮ ನಿರ್ದೇಶಕರಾದ ಆನಂದ ಚಂಗಳಿ, ಮಹೇಶ ಗದಗ, ಸಮಾಜ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಸಭೆಯಲ್ಲಿ ಪುರಸಭೆ ಸದಸ್ಯರಾದ ವಿಜಯಲಕ್ಷ್ಮಿ ಬಸವರಾಜ ಕೊಟಗಿ, ಬಣಜಿಗ ಸಮಾಜದ ಉಪಾಧ್ಯಕ್ಷ ಸಂಗಣ್ಣ ಮೆಣಸಿನಕಾಯಿ, ಕಾರ್ಯದರ್ಶಿ ಮುತ್ತಣ್ಣ ಗದಗ, ಮುತ್ತಣ ಕಡಗದ ಮುಂತಾದವರಿದ್ದರು.