ವಿಜಯಸಾಕ್ಷಿ ಸುದ್ದಿ, ಲಂಡನ್
ಇಂಗ್ಲೆಂಡ್ ನ ಪ್ರಧಾನಿ ಬೋರಿಸ್ ಜಾನ್ಸನ್ ಅವರು ರಹಸ್ಯ ಸಮಾರಂಭದಲ್ಲಿ ತನ್ನ ಪ್ರೇಯಸಿ ಕ್ಯಾರಿ ಸೈಮಂಡ್ಸ್ ಅವರನ್ನು ಮದುವೆಯಾಗಿದ್ದಾರೆ ಎಂದು ಸನ್ ಮತ್ತು ಮೇಲ್ ಆನ್ ಸಂಡೇ ಪತ್ರಿಕೆಗಳು ವರದಿ ಮಾಡಿವೆ.
ಈ ಸಮಾರಂಭಕ್ಕೆ ಅತಿಥಿಗಳನ್ನು ಆಹ್ವಾನಿಸಲಾಗಿದೆ ಎನ್ನಲಾಗಿದೆ. ಕ್ಯಾಥೋಲಿಕ್ ಕ್ಯಾಥೆಡ್ರಲ್ ನ್ನು ಮಧ್ಯಾಹ್ನ 1.30ರ ಸಮಯದಲ್ಲಿ ತಕ್ಷಣಕ್ಕೆ ಮುಚ್ಚಲಾಯಿತು. ಅರ್ಧ ನಂತರ 33 ವರ್ಷದ ಸೈಮಂಡ್ಸ್ ಶ್ವೇತ ವರ್ಣದ ಉಡುಪು ಧರಿಸಿ ಐಷಾರಾಮಿ ಲಿಮೊಸಿನ್ ಕಾರಿನಲ್ಲಿ ಆಗಮಿಸಿದರು ಎಂದು ವರದಿಗಳಿಂದ ತಿಳಿದು ಬಂದಿದೆ.
ಪ್ರಧಾನಿ ಬೋರಿಸ್ ಜಾನ್ಸನ್ ಅವರು 56 ವರ್ಷದವರಾಗಿದ್ದು, 33 ವರ್ಷದ ಸೈಮಂಡ್ಸ್ ಇಬ್ಬರೂ ಪ್ರೀತಿಸುತ್ತಿದ್ದರು ಎನ್ನಲಾಗಿದೆ. ಜಾನ್ಸನ್ ಅವರು ಇಂಗ್ಲೆಂಡ್ ನ ಪ್ರಧಾನಿಯಾದ ನಂತರ ಇಬ್ಬರೂ ಲಿವಿಂಗ್ ಟುಗೆದರ್ ಇದ್ದರು ಎನ್ನಲಾಗಿದೆ..ಅಲ್ಲದೇ, ಹಿಂದಿನ ವರ್ಷವೇ ಇಬ್ಬರೂ ಎಂಗೇಜ್ ಮಾಡಿಕೊಂಡಿದ್ದರು. ಅಲ್ಲದೇ, ಮಗುವಿನ ನಿರೀಕ್ಷೆಯಲ್ಲಿದ್ದೇವೆ ಎಂದು ಕೂಡ ಹೇಳಿದ್ದರು.
ಜಾನ್ಸನ್ ಅವರು ಎರಡು ಬಾರಿ ವಿಚ್ಛೇದನ ಪಡೆದಿದ್ದಾರೆ. ಬೋರಿಸ್ ತಮಗೆ ಎಷ್ಟು ಮಕ್ಕಳು ಎಂದು ಹೇಳಲು ಯಾವಾಗಲೂ ನಿರಾಕರಿಸುತ್ತಾರೆ.