ವಿಜಯಸಾಕ್ಷಿ ಸುದ್ದಿ, ಗದಗ : ಬೆಟಗೇರಿಯ ಹೆಲ್ತ್ ಕ್ಯಾಂಪ್ ಯುವಕ ಸಂಘದಿಂದ 35ನೇ ವರ್ಷದ ಶ್ರೀ ಗಜಾನನೋತ್ಸವವನ್ನು ಆಚರಿಸಲಾಗುತ್ತಿದೆ. ಈ ಹಿಂದೆ ಬೃಂದಾವನ ಗಾರ್ಡನ್, ಜೋಗ್ ಫಾಲ್ಸ್, ಟೈಟಾನಿಕ್ ಬೋಟ್, ಆಂತರಿಕ್ಷದಲ್ಲಿ ಗಣೇಶನ ದರ್ಶನ, ಹೀ ಮ್ಯಾನ್, ಮ್ಯೂಸಿಕಲ್ ಫೌಂಟನ್ ಹೀಗೆ ಹತ್ತು ಹಲವಾರು ಸುಂದರ ಸನ್ನಿವೇಶಗಳನ್ನು ಮಾಡಿ ಗಮನ ಸೆಳೆದಿತ್ತು.
ಸದರಿ ಯುವಕ ಸಂಘದ ಮೋಹನ ಕಬಾಡಿ, ಲಿಂಗರಾಜ ಬಗಲಿ, ಕಿಶೋರ ಮುದಗಲ್, ಅರವಿಂದ ಹುಲ್ಲೂರ, ಬಸವರಾಜ ನೀರೇರ, ಸುನೀಲ ತೆಂಬದಮನಿ, ಅನಿಲ ತೆಂಬದಮನಿ, ಶಂಕರ ಹಾನಗಲ್, ಸುದರ್ಶನ ಹಾನಗಲ್, ಬನೇಶ ಕುಲಕರ್ಣಿ, ಅಜೀತ ಕುಲಕರ್ಣಿ, ಚಂದ್ರಕಾಂತ ಹಾನಗಲ್, ಕಾಂತೇಶ ಹಾನಗಲ್, ಸಿದ್ಧಾರ್ಥ ಬಗಲಿನವರ, ಆಕಾಶ ಚಾಟೆ, ಸಮರ್ಥ ತೆಂಬದಮನಿ, ವಿಶ್ವನಾಥ ಅಂಗಡಿ, ರಜತ ತೆಂಬದಮನಿ, ದರ್ಶನ್ ಪಟೇಲ್, ವೈಭವ ಮುದಗಲ್, ಪ್ರಜ್ವಲ್ ಹುಲ್ಲೂರ, ಗೌರವ ಹಬೀಬ ಇವರುಗಳು ಗಣೇಶ ಪ್ರತಿಷ್ಠಾಪಣೆಯ ಸಂದರ್ಭದಲ್ಲಿ ಶ್ರಮಿಸುತ್ತಿದ್ದಾರೆ.