ಬಾಲ ವಿನಾಯಕ ವಿದ್ಯಾನಿಕೇತನದ 39ನೇ ವಾರ್ಷಿಕ ಸ್ನೇಹ ಸಮ್ಮೇಳನ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ಮಕ್ಕಳು ದೂರದರ್ಶನ, ಮೊಬೈಲ್, ಧಾರಾವಾಹಿ ಇವುಗಳ ಪ್ರಭಾವಕ್ಕೆ ಒಳಗಾಗದಂತೆ ಪಾಲಕರು ಗಮನಿಸಬೇಕು. ಪ್ರತಿ ಒಬ್ಬ ತಂದೆ-ತಾಯಿ ಮಕ್ಕಳ ಮೇಲೆ ಭರವಸೆಯನ್ನು ಇಡಬೇಕು. ಯಾವ ಮಕ್ಕಳು ತಮ್ಮ ಸಮಸ್ಯೆಗಳನ್ನು ಪಾಲಕರ ಮುಂದೆ ಹೇಳಿಕೊಳ್ಳತ್ತಾರೋ ಆಗಲೇ ಪಾಲಕರ ಮತ್ತು ಮಕ್ಕಳ ನಡುವೆ ಬಾಂಧವ್ಯ ಬೆಳೆಯುತ್ತದೆ ಎಂದು ಮಹೇಶ ಜಾಧವ ಅಭಿಪ್ರಾಯಪಟ್ಟರು.

Advertisement

ನಗರದ ಬಾಲ ವಿನಾಯಕ ವಿದ್ಯಾನಿಕೇತನದ 39ನೇ ವಾರ್ಷಿಕ ಸ್ನೇಹ ಸಮ್ಮೇಳನವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ನಮ್ಮ ಮಕ್ಕಳಿಗೆ ಸಮಾಜ ಸೇವೆಯ, ಇನ್ನೊಬ್ಬರಿಗೆ ಸಹಾಯ ಮಾಡುವ ಮನೋಭಾವನೆಯನ್ನು ಬೆಳೆಸಬೇಕು. ಸಮಾಜದಿಂದ ದೂರ ಉಳಿದ ಎಚ್.ಐ.ವಿ ಪೀಡಿತ ಮಕ್ಕಳಿಗೆ ಸಹಾಯ ಮಾಡಲು ತಾವು ಮತ್ತು ತಮ್ಮ ಸ್ನೇಹಿತರು ಮಹೇಶ ಫೌಂಡೆಶನ್ ಸಂಸ್ಥೆಯನ್ನು ಪ್ರಾರಂಭಿಸಿ ಅದನ್ನು ಯಾವ ರೀತಿ ಬೆಳೆಸುತ್ತಿದ್ದಾರೆಂದು ಪಾಲಕರಿಗೆ ಅರ್ಥೈಸಿದರು.

ಪಂ. ಪುಟ್ಟರಾಜ ಮ್ಯೂಜಿಕ ಕ್ಲಬ್ ತಂಡದವರಾದ ಸಿಂಧು ಮತ್ತು ಸಂಗಡಿಗರು ಪ್ರಾರ್ಥನಾಗೀತೆ ಹಾಡಿದರು. ಶ್ವೇತಾ ಯಮಗೌಳಿ ಮತ್ತು ಸಂಗಡಿಗರು ಸ್ವಾಗತ ನೃತ್ಯ ಪ್ರದರ್ಶಿಸಿದರು. ವಿದ್ಯಾರ್ಥಿಗಳಾದ ಸಂಜಯ ಕುಲಕರ್ಣಿ ಮತ್ತು ಲಕ್ಷ್ಮಿ ಬರದೂರ್ ಅತಿಥಿಗಳನ್ನು ಪರಿಚಯಿಸಿದರು. ಮೊಹ್ಮದ ಅಜೀಮ್ ಬಿಜಾಪುರ ಪುಷ್ಪಾರ್ಪಣೆ ನಡೆಸಿಕೊಟ್ಟನು. ಶಾಲಾ ನಿರ್ದೆಕರಾದ ವಿನಾಯಕ್ ಆರ್ 2024-25ನೇ ಸಾಲಿನ ಶಾಲಾ ವರದಿಯನ್ನು ಓದಿದರು. ಸಾಹಿಲ್ ತಂಬೋಟಿ ಶಾಲಾ ವಾರ್ಷಿಕ ಪುಸ್ತಕವಾದ `ಶುಭಂ’ ಬಿಡುಗಡೆ ಕಾರ್ಯಕ್ರಮ ನಡೆಸಿಕೊಟ್ಟರು.

ವಿದ್ಯಾರ್ಥಿಗಳಾದ ಆದಿತ್ಯ ಅಂಗಡಿ, ನಂದಾ ಮಾವಿನಕಾಯಿ, ಚಿನ್ಮಯ ಆರಿ, ಅನುಷಾ ತಿಪ್ಪಾಪುರ, ತನ್ವೀರ್ ಜೈನಾಪುರ, ತನುಷಾ ಹಳ್ಳಿ, ಪಂಚಾಕ್ಷರಯ್ಯ ಹೀರೆಮಠ, ವೈಷ್ಣವಿ ತಿಪ್ಪಾರಡ್ಡಿ, ದಕ್ಷ ಜೈನ್, ಪೂಜಾ ಲಮಾಣಿ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಮಿಸ್ಬಾ ಕೊಟ್ಟರು, ಪ್ರತೀಕ ಭೂಸನೂರಮಠ, ಸಾಕ್ಷಿ ಮರಿಗೌಡ್ರ, ಶ್ರೀನಿವಾಸ ಬಾಕಳೆ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನಿರೂಪಿಸಿದರು. ಶ್ರಾವಣಿ ಅಣ್ಣಿಗೇರಿ ಮತ್ತು ಅನುಷ್ ಹಿರೇಮಠ ಕಾರ್ಯಕ್ರಮ ನಿರೂಪಿಸಿದರು. ವೈಷ್ಣವಿ ಮೆಣಸಗಿ ಸ್ವಾಗತಿಸಿದಳು. ಪವಿತ್ರ ರಂಗಾರಡ್ಡಿಯವರ ವಂದಿಸಿದಳು.

ಕಾರ್ಯಕ್ರಮದಲ್ಲಿ ಶಾಲೆಯ ಕಾರ್ಯದರ್ಶಿ ಎಸ್.ರವಿ, ಪ್ಲೇ ಹೋಮ್‌ನ ಮುಖ್ಯಸ್ಥರಾದ ಗಂಗಾ, ನಿರ್ದೇಶಕರಾದ ವಿನಾಯಕ್ ಆರ್., ಇ.ಎಲ್.ಸಿ ಮುಖ್ಯಸ್ಧರಾದ ಮಲ್ಲಿಕಾ ರವಿ, ಪ್ರಾಚಾರ್ಯ ವಿ.ಎಂ. ಅಡ್ನೂರ, ಉಪ ಪ್ರಾಚಾರ್ಯ ಪಿ.ಜಿ. ಬ್ಯಾಳಿ, ಶಿಕ್ಷಕ-ಶಿಕ್ಷಕೇತರ ಸಿಬ್ಬಂದಿ ವರ್ಗದವರು, ಪಾಲಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

2023 2024ರ ಶೈಕ್ಷಣಿಕ ವರ್ಷದ ಪರೀಕ್ಷೆಗಳಲ್ಲಿ ಅತಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ, 2024-25ನೇ ಸಾಲಿನ ಶಾಲೆಯ ಕ್ರೀಡಾ ವೀರಾಗ್ರಣಿ ವಿಜೇತರಿಗೆ, ಪಠ್ಯ-ಸಹಪಠ್ಯ ಚಟುವಟಿಕೆಯಲ್ಲಿ ಪ್ರಶಸ್ತಿ ವಿಜೇತರಿಗೆ, ಶಿಸ್ತಿನ ತರಗತಿ, ಸೇರಿ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ವಿತರಿಸಲಾಯಿತು.


Spread the love

LEAVE A REPLY

Please enter your comment!
Please enter your name here