HomeKarnataka Newsಏರ್ ಕೂಲರ್‌ನಿಂದ ಎಲೆಕ್ಟ್ರಿಕ್ ಶಾಕ್ ಹೊಡೆದು 4 ವರ್ಷದ ಮಗು ಸಾವು!

ಏರ್ ಕೂಲರ್‌ನಿಂದ ಎಲೆಕ್ಟ್ರಿಕ್ ಶಾಕ್ ಹೊಡೆದು 4 ವರ್ಷದ ಮಗು ಸಾವು!

For Dai;y Updates Join Our whatsapp Group

Spread the love

ಬೆಂಗಳೂರು:- ಬಸವೇಶ್ವರ ನಗರದ ಕಲ್ಯಾಣಮಂಟಪವೊಂದರಲ್ಲಿ ಅವಘಡ ಸಂಭವಿಸಿದ್ದು, ಏರ್ ಕೂಲರ್‌ನಿಂದ ಎಲೆಕ್ಟ್ರಿಕ್ ಶಾಕ್ ಹೊಡೆದು ನಾಲ್ಕು ವರ್ಷದ ಮಗು ಮೃತಪಟ್ಟ ಘಟನೆ ಜರುಗಿದೆ.

4 ವರ್ಷದ ಎಂ.ಶಿವಂ ಮೃತ ಮಗು. ವೆಸ್ಟ್ ಆಫ್ ಕಾರ್ಡ್ ರೋಡ್‍ನ ಅಭಿಮಾನಿ ಕನ್ವೆನ್ಷನ್ ಹಾಲ್‍ನಲ್ಲಿ ಮದುವೆ ರಿಸೆಪ್ಷನ್ ವೇಳೆ ಈ ಘಟನೆ ನಡೆದಿದೆ. ಬುಧವಾರ ಈ ಅವಘಡ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಶಿವಂ, ಕೆಂಪೆಗೌಡ ನಗರ ನಿವಾಸಿಯಾದ ಪ್ರದೀಪ್ ಮತ್ತು ದೀಪಾ ದಂಪತಿ ಪುತ್ರ ಎಂದು ತಿಳಿದುಬಂದಿದೆ. ಸಂಬಂಧಿಕರ ಮದುವೆಗೆ ಬಂದಿದ್ದ ವೇಳೆ ಈ ದುರ್ಘಟನೆ ನಡೆದಿದೆ. ಮಗು ಏರ್ ಕೂಲರ್ ಬಳಿ ಬಿದ್ದಿರೋದನ್ನು ನೋಡಿ ತಾಯಿ ಹತ್ತಿರ ಹೋದಾಗ ತಾಯಿಗೂ ಕರೆಂಟ್ ಶಾಕ್ ಹೊಡೆದಿದೆ ಎಂದು ತಿಳಿದು ಬಂದಿದೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!