ಬೆಂಗಳೂರು: ರಾಜಕೀಯ ಪ್ರೇರಿತವಾಗಿ ದಾಖಲಿಸಿದ್ದ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ರಾಜಕೀಯ ಪ್ರೇರಿತವಾಗಿ ದಾಖಲಿಸಿದ್ದ ಕೇಸ್ ವಾಪಸ್ ತೆಗೆದುಕೊಂಡಿದ್ದೇವೆ. ಕೆಲವು ಕೇಸ್‌ಗಳನ್ನು ಚರ್ಚೆ ಮಾಡಿ ವಾಪಸ್ ತೆಗೆದುಕೊಂಡಿದ್ದೇವೆ.
ಗಲಭೆ ಪ್ರಕರಣಗಳಲ್ಲಿ ಇತರೆ ಆರೋಪಿಗಳು ಎಂದು ಸೇರಿಸಿರುತ್ತಾರೆ. ಹೀಗಾಗಿ ಅದರ ತನಿಖೆ ಮಾಡಿ ಪ್ರಕರಣಗಳನ್ನು ಹಿಂಪಡೆದಿದ್ದೇವೆ. ಇದರಲ್ಲಿ ಯಾವುದೇ ರಾಜಕೀಯ ಇಲ್ಲ ಎಂದರು.
ಇನ್ನೂ ಸಿ.ಟಿ ರವಿ ಅವರ ಪ್ರಕರಣವನ್ನು ವಾಪಸ್ ತೆಗೆದುಕೊಂಡಿದ್ದೇವೆ. ಇದು ರಾಜಕೀಯ ಅಂತಾ ಅವರು ಹೇಳ್ತಾರಾ? ಹೇಳಲಿ ಅವರಿಗೆ ಏನು ಶಿಕ್ಷೆ ಆಗಬೇಕು ಆಗಲಿ. ಎಲ್ಲ ಕೇಸ್ ಪರಿಶೀಲನೆ ಮಾಡಲಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದು ಬಿ ರಿಪೋರ್ಟ್ ಹಾಕುತ್ತಿದ್ದೇವೆ ಎಂದು ಸರ್ಕಾರದ ನಿರ್ಧಾರವನ್ನ ಸಮರ್ಥನೆ ಮಾಡಿಕೊಂಡರು.



