ಬೆಂಗಳೂರು: ರಾಜ್ಯದಲ್ಲಿ ಇಂದು 435 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಸದ್ಯ 334 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದು ಕಂಡುಬಂದಿದೆ.
ಕಳೆದ 24 ಗಂಟೆಗಳಲ್ಲಿ 4989 ಮಂದಿಗೆ ಟೆಸ್ಟ್ ಮಾಡಲಾಗಿದ್ದು, ಈ ಪೈಕಿ 435 ಮಂದಿಗೆ ಸೋಂಕು ದೃಢಪಟ್ಟಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಒಬ್ಬರು ಮೃತಪಟ್ಟಿದ್ದಾರೆ. ಬಿಬಿಎಂಪಿ 363, ಬೆಂಗಳೂರು ನಗರ 1, ಬೆಂಗಳೂರು ಗ್ರಾಮಾಂತರ 5, ಚಿಕ್ಕಬಳ್ಳಾಪುರ 5, ಶಿವಮೊಗ್ಗ 1, ಬಾಗಲಕೋಟೆ 2, ಧಾರವಾಡ 14, ಯಾದಗಿರಿ 1, ಬಳ್ಳಾರಿ 3, ಕೊಪ್ಪಳ 4, ಮಂಡ್ಯ ಜಿಲ್ಲೆಯಲ್ಲಿ 36 ಪ್ರಕರಣ ದಾಖಲಾಗಿವೆ. ಸದ್ಯ ರಾಜ್ಯದಲ್ಲಿ ಒಟ್ಟ 334 ಸಕ್ರಿಯ ಪ್ರಕರಣಗಳು ಇವೆ.
ಜನವರಿಯಿಂದ ಇಲ್ಲಿಯವರೆಗೂ ಒಟ್ಟು 9962 ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 8 ಮಂದಿ ಮೃತಪಟ್ಟಿದ್ದಾರೆ. ರಾಜ್ಯದಲ್ಲಿ ಶೇ. 0.08 ಡೆಂಗ್ಯೂ ಸಾವಿನ ಪ್ರಮಾಣ ಇದೆ.



