ಲಕ್ಷ್ಮೇಶ್ವರ: ಭೂ ಕೈಲಾಸ ಮುಕ್ತಿಮಂದಿರ ಧರ್ಮಕ್ಷೇತ್ರದಲ್ಲಿ ಅ.9 ರ ಗುರುವಾರ ಲಿಂ. ಶ್ರೀ ರಂಭಾಪುರಿ ವೀರಗಂಗಾಧರ ಜಗದ್ಗುರುಗಳ 43ನೇ ಪುಣ್ಯಾರಾಧನೆ ಮಹೋತ್ಸವ ಮತ್ತು ಧರ್ಮಜಾಗೃತಿ ಸಮಾರಂಭ ಬಾಳೆಹೊನ್ನೂರು ಶ್ರೀಮದ್ ರಂಭಾಪುರಿ ವೀರಸಿಂಹಾಸನಾಧೀಶ್ವರ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಜರುಗಲಿದೆ ಎಂದು ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷರಾದ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ಹೇಳಿದರು.
ಭಾನುವಾರ ಅವರು ಕಾರ್ಯಕ್ರಮದ ಕುರಿತು ಮಾಹಿತಿ ನೀಡಿದರು. ಅಂದು ಪ್ರಾತಃಕಾಲ ಪಂಚಾಚಾರ್ಯ ಧ್ವಜಾರೋಹಣ, ಕರ್ತೃ ಗದ್ದುಗೆಗೆ ಮಹಾಪೂಜೆ, ಪಂಚಾಮೃತಾಭಿಷೇಕ, ಷೋಡಶೋಪಚಾರ ಪೂಜೆ, ರುದ್ರಾಭಿಷೇಕ, ಶಿವಸ್ತೋತ್ರ, ಸಹಸ್ರ ನಾಮಾವಳಿ, ಧರ್ಮಗೀತೆ, ಮಹಾಮಂಗಳಾರತಿ, ಪುಷ್ಪಾಂಜಲಿ, ತೀರ್ಥಪ್ರಸಾದ ನಡೆಯಲಿವೆ. ಅಲ್ಲದೆ ಇದೇ ಕಾರ್ಯಕ್ರಮದಲ್ಲಿ ಕಲಾದಗಿ ಪಂಚಗ್ರಹ ಹಿರೇಮಠದ ಲಿಂ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಯವರ ಹತ್ತನೇ ವರ್ಷದ ಪುಣ್ಯಸ್ಮರಣೋತ್ಸವ ಜರುಗುವುದು.
ಅಂದು ಮಧ್ಯಾಹ್ನ 1ಕ್ಕೆ ಲಿಂ. ರಂಭಾಪುರಿ ವೀರಗಂಗಾಧರ ಜಗದ್ಗುರುಗಳವರ ಮಹಾಮೂರ್ತಿಯ ಅಡ್ಡಪಲ್ಲಕ್ಕಿ ಮಹೋತ್ಸವ, ಸಂಜೆ 4ಕ್ಕೆ ಬಾಳೆಹೊನ್ನೂರು ರಂಭಾಪುರಿ ಪೀಠದ ಜಗದ್ಗುರು ಪ್ರಸನ್ನ ರೇಣುಕ ಡಾ.ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ಸಾನ್ನಿಧ್ಯದಲ್ಲಿ ಧರ್ಮ ಸಭೆ ಜರುಗುವುದು. ನೊಣವಿನಕೆರೆ ಕಾಡಸಿದ್ದೇಶ್ವರಮಠದ ಡಾ.ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ ಅಧ್ಯಕ್ಷತೆ ಹಾಗೂ ಶ್ರೀ ವಿಮಲರೇಣುಕ ವೀರಮುಕ್ತಿಮುನಿ ಶಿವಾಚಾರ್ಯರು ನೇತೃತ್ವ ವಹಿಸಿಕೊಳ್ಳಲಿದ್ದು ನಾಡಿನ ಹರಗುರುಚರ ಮೂರ್ತಿಗಳು ಉಪಸ್ಥಿತರಿರುವರು.
ಕಾರ್ಯಕ್ರಮದಲ್ಲಿ ಮಾಜಿ ಸಚಿವರು, ಧರ್ಮಾಭಿಮಾನಿಗಳಾದ ಶಾಮನೂರು ಶಿವಶಂಕ್ರಪ್ಪ ಅವರಿಗೆ ಶ್ರೀರಂಭಾಪುರಿ ಜಗದ್ಗುರು ವೀರಗಂಗಾಧರ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಾಗುವುದು. ‘ಗಣಿ ಮತ್ತು ಭೂ ವಿಜ್ಞಾನ ಹಾಗೂ ತೋಟಗಾರಿಕೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಸಮಾರಂಭ ಉದ್ಘಾಟಿಸುವರು. ಸಚಿವ ಹೆಚ್.ಕೆ. ಪಾಟೀಲ, ಸಂಸದ ಬಸವರಾಜ ಬೊಮ್ಮಾಯಿ, ಶಾಸಕರಾದ ಡಾ.ಚಂದ್ರು ಲಮಾಣಿ, ಎಂ.ಆರ್. ಪಾಟೀಲ, ಶ್ರೀನಿವಾಸ ಮಾನೆ, ಶಾಸಕರು, ಮಾಜಿ ಶಾಸಕರಾದ ಜಿ.ಎಂ. ಮಹಾಂತಶೆಟ್ಟರ, ಜಿ.ಎಸ್. ಗಡ್ಡದೇವರಮಠ, ರಾಮಕೃಷ್ಣ ದೊಡ್ಡಮನಿ, ಎಸ್.ಐ. ಚಿಕ್ಕನಗೌಡ್ರ, ಕುಸುಮಾವತಿ ಶಿವಳ್ಳಿ, ಎನ್.ಎ. ಚರಂತಿಮಠ, ರಜತ್ ಉಳ್ಳಾಗಡ್ಡಿಮಠ, ಎಂ.ಹೆಚ್. ಕೋನರೆಡ್ಡಿ, ಜಿ.ಎಸ್. ಪಾಟೀಲ, ಎಸ್.ವಿ. ಸಂಕನೂರು, ರಾಮಣ್ಣ ಲಮಾಣಿ, ಎಂ.ಎಸ್. ಅಕ್ಕಿ, ಮಲ್ಲಿಕಾರ್ಜುನ ಗುಂಗೆ, ರಾಜೇಶ್ ಅಮ್ಮಿನಬಾವಿ, ವೀರಯ್ಯಸ್ವಾಮಿ, ಯುವರಾಜ, ಆನಂದಸ್ವಾಮಿ ಗಡ್ಡದೇವರಮಠ, ಎಸ್.ವಿ. ಕೂಗುಮಠ ಸೇರಿದಂತೆ ಮತ್ತಿತರರು ಆಗಮಿಸುವರು ಎಂದು ಮುಕ್ತಿಮಂದಿರ ಶ್ರೀಗಳು ತಿಳಿಸಿದರು.



