ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ 45ನೇ ವರ್ಷದ ದಸರಾ ಮಹೋತ್ಸವ, ಘಟಸ್ಥಾಪನೆ, ಶ್ರೀದೇವಿ ಪುರಾಣ ಪ್ರಾರಂಭೋತ್ಸವ ಮತ್ತು ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಕಾರ್ಯಕ್ರಮಗಳು ಸೆ. 22ರಿಂದ ಅಕ್ಟೋಬರ್ 3ರವರೆಗೆ ಜರುಗಲಿವೆ ಎಂದು ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಅಧ್ಯಕ್ಷ ಸದಾಶಿವಯ್ಯ ಎಸ್. ಮದರಿಮಠ ತಿಳಿಸಿದರು.
ನಗರದ ಮುಳಗುಂದನಾಕಾ ಬಳಿಯ ಶ್ರೀಅಡವೀಂದ್ರಸ್ವಾಮಿ ಮಠದಲ್ಲಿ ಗುರುವಾರ ಏರ್ಪಡಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿದರು.
ಸೆ. 22ರಂದು ಮುದೇನೂರ ಶಶಿಧರ ಮಹಾಸ್ವಾಮಿಗಳ ಕೃಪಾಶೀರ್ವಾದದಿಂದ ಶಮಿ, ಆರಿ, ಬಿಲ್ವ ವೃಕ್ಷಗಳ ಸಂಗಮದ ಪವಿತ್ರ ಸ್ಥಳದಲ್ಲಿ ಸ್ಥಾಪಿಸಲ್ಪಟ್ಟ ಶ್ರೀಅನ್ನಪೂರ್ಣೇಶ್ವರಿಯ ಸನ್ನಿಧಿಯಲ್ಲಿ 45ನೇ ವರ್ಷದ ಶ್ರೀದೇವಿ ಪುರಾಣ ಪ್ರವಚನ ಪ್ರಾರಂಭೋತ್ಸವ ಜರುಗಲಿದೆ. ಡಾ. ರಾಜಗುರು ಗುರುಸ್ವಾಮಿ ಕಲಕೇರಿ ಪುರಾಣ ಪ್ರವಚನ ಮಾಡುವರು, ಚನ್ನಬಸಯ್ಯ ಶಾಸ್ತ್ರಿಗಳು ಹೇಮಗಿರಿಮಠ ಪುರಾಣ ಪಠಣ ಮಾಡುವರು ಎಂದರು.
ಸೆ. 22ರಂದು ಮುಂಜಾನೆ 9 ಗಂಟೆಗೆ ಧರ್ಮಧ್ವಜಾರೋಹಣವನ್ನು ಶ್ರೀಅಡವೀಂದ್ರಸ್ವಾಮಿ ಮಠದ ಧರ್ಮದರ್ಶಿಗಳಾದ ಮಹೇಶ್ವರ ಸ್ವಾಮಿಗಳವರ ಸಮ್ಮುಖದಲ್ಲಿ ಹಿರೇವಡ್ಡಟ್ಟಿಯ ವೀರೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ನೆರವೇರಿಸುವರು. ಸಂಜೆ 6.30ಕ್ಕೆ ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವವನ್ನು ಶ್ರೀಗುರು ಅಭಿನವ ಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯದಲ್ಲಿ ಶುಭ್ ಜುವೆಲರ್ಸ್ ಮಾಲೀಕರಾದ ಪೂಜಾ ಕಿರಣ ಭೂಮಾ ಹಾಗೂ ದತ್ತಾ ಪ್ರಾಪರ್ಟೀಸ್ ವ್ಯವಸ್ಥಾಪಕರಾದ ಕಿರಣ ಪ್ರಕಾಶ ಭೂಮಾ ಉದ್ಘಾಟಿಸುವರು ಎಂದು ಹೇಳಿದರು.
ಸೆ. 23ರ ಸಂಜೆ 6.30ಕ್ಕೆ ಶ್ರೀದೇವಿಗೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಜರುಗಲಿದ್ದು, ಸೆ. 24 ಹಾಗೂ ಸೆ. 25ರಂದು ಸಂಜೆ 6.30 ಗಂಟೆಗೆ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಸೆ. 26ರಂದು ಸಂಜೆ 6.30ಕ್ಕೆ ಶ್ರೀದೇವಿಗೆ ಹಾಗೂ ಮುತ್ತೆದೆವರಿಗೆ ಅರಿಷಿಣ, ಕುಂಕುಮ, ಬಳೆ ಸೇವೆ ಜರುಗಲಿದೆ. ಸೆ. 27ರಂದು ಸಂಜೆ 6.30ಕ್ಕೆ ಧಾರ್ಮಿಕ ಕಾರ್ಯಕ್ರಮ, ಸೆ. 28ರಂದು ಮುಂಜಾನೆ 10 ಗಂಟೆಗೆ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಡಾ. ವೀರೇಶ ದ್ಯಾವಣ್ಣರ ಹಾಗೂ ಅಭಿಷೇಕ ಹೊಸಳ್ಳಿಮಠ ಅವರ ತಂಡದಿಂದ ಜರುಗಲಿದೆ. ಸೆ. 28ರಿಂದ 30ರವರೆಗೆ ಪ್ರತಿದಿನ ಸಂಜೆ 6.30ಕ್ಕೆ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಅ. 3ರಂದು ಮುಂಜಾನೆ 7.15ಕ್ಕೆ ಗದಗ ಒಕ್ಕಲಗೇರಿ ಶ್ರಿರಾಯಚೋಟಿ ವಿರಭದ್ರೇಶ್ವರ ದೇವಸ್ಥಾನದಿಂದ ಕುಂಭೋತ್ಸವ ಹೊರಡುವುದು. ಮುಂಜಾನೆ 9.30ಕ್ಕೆ ಶ್ರೀಅನ್ನಪೂರ್ಣೇಶ್ವರಿದೇವಿಗೆ ಹಾಗೂ ಕರ್ತೃ ಗದ್ದುಗೆಗೆ ಕುಂಭಾಭಿಷೇಕ, ಮಧ್ಯಾಹ್ನ 12ಕ್ಕೆ ಪುಣ್ಯಸ್ಮರಣೋತ್ಸವ, ಮಹಾಪ್ರಸಾದ ಜರುಗಲಿದೆ. ಮಧ್ಯಾಹ್ನ 3.30ಕ್ಕೆ ತೇರಿನಹಗ್ಗ ಮುಳಗುಂದ ರಸ್ತೆಯ ಜಗದಂಬಾ ದೇವಸ್ಥಾನದಿಂದ ಶ್ರೀಮಠಕ್ಕೆ ಆಗಮಿಸುವುದು. ಸಂಜೆ 5ಕ್ಕೆ ಶ್ರೀಅನ್ನಪೂರ್ಣೇಶ್ವರಿದೇವಿ ಮಹಾರಥೋತ್ಸವ ಕನಕಗಿರಿಯ ಸುವರ್ಣಗಿರಿ ಸಂಸ್ಥಾನಮಠದ ಶ್ರೀನಿರಂಜನಪ್ರಭು ಚನ್ನಮಲ್ಲ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಜರುಗುವುದು. ಸಂಜೆ 7ಕ್ಕೆ ಜಾನಪದ ವಿದ್ವಾಂಸರಾದ ಡಾ. ಶಂಭು ಬಳಿಗಾರ ಅವರಿಂದ ಜಾನಪದ ಜೀವನ ದರ್ಶನ ಕಾರ್ಯಕ್ರಮ ಜರುಗಲಿದೆ.
ಅ. 4ರಂದು ಸಂಜೆ 6.30ಕ್ಕೆ ಕಡುಬಿನ ಕಾಳಗ ಪುರವಂತರ ಸಮ್ಮುಖದಲ್ಲಿ ವಾದ್ಯ ವೈಭವದೊಂದಿಗೆ ಜರುಗುವುದು ಎಂದು ಹೇಳಿದರು.
ಶ್ರೀಅನ್ನಪೂರ್ಣೇಶ್ವರಿದೇವಿ ಜಾತ್ರಾ ಮಹೋತ್ಸವ ಸಮಿತಿಯ ಗೌರವಾಧ್ಯಕ್ಷ ಎಸ್.ಪಿ. ಸಂಶಿಮಠ, ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಎಸ್. ಗುಡಿಮನಿ, ಸಹ ಕಾರ್ಯದರ್ಶಿ ಗುರುಬಸವಲಿಂಗ ದಾನಪ್ಪ ತಡಸದ, ಕೋಶಾಧ್ಯಕ್ಷ ವಿರುಪಣ್ಣ ಬಳ್ಳೊಳ್ಳಿ, ಮಹಿಳಾ ಸಮಿತಿ ಅಧ್ಯಕ್ಷರಾದ ಸುವರ್ಣಾ ಎಸ್. ಮದರಿಮಠ, ಕಾರ್ಯದರ್ಶಿ ಗೀತಾ ವಿ. ಹೂಗಾರ, ಸಹಕಾರ್ಯದರ್ಶಿ ಸುಷ್ಮಾ ಎಸ್. ಖಂಡಪ್ಪಗೌಡ್ರ, ಕೋಶಾಧ್ಯಕ್ಷರಾದ ಅಶ್ವಿನಿ ಎಸ್. ನೀಲಗುಂದ, ವೀರೇಶ ಕೂಗು, ಕಸ್ತೂರಿಬಾಯಿ ಭಾಂಡಗೆ, ವಿನೋದ ಭಾಂಡಗೆ, ರಾಜು ಕುರಡಗಿ, ವಿ.ಎಚ್. ದೇಸಾಯಿಗೌಡ್ರ ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.
ಅ. 1ರಂದು ಸಂಜೆ 6.30ಕ್ಕೆ ಆಯುಧಪೂಜೆ, ಕುಮಾರಿ ಪೂಜೆ ಹಾಗೂ ಶ್ರೀದೇವಿ ಪುರಾಣ ಮಂಗಲೋತ್ಸವ ಜರುಗಲಿದೆ. ಅ. 2ರಂದು ಮುಂಜಾನೆ 9ಕ್ಕೆ ಗದಗ ಶ್ರೀರೇಣುಕಾಚಾರ್ಯ ಮಂದಿರದಿಂದ ಭವ್ಯ ಮೆರವಣಿಗೆ ಮೂಲಕ ತೇರಿನ ಕಳಸ ಆಗಮನ, ಮುಂಜಾನೆ 10ಕ್ಕೆ ಕಳಸಾರೋಹಣ ಪೂಜ್ಯಶ್ರೀಗಳವರಿಂದ ಜರುಗುವುದು. ಮುಂಜಾನೆ 11ಕ್ಕೆ ವಿಜಯದಶಮಿ ಬನ್ನಿಮುಡಿಯುವ ಕಾರ್ಯಕ್ರಮ ಜರುಗಲಿದೆ ಎಂದು ಸದಾಶಿವಯ್ಯ ಎಸ್. ಮದರಿಮಠ ತಿಳಿಸಿದರು.