ಗದಗ:- ಮದುವೆಯಾಗುವಂತೆ 47 ವರ್ಷದ ಅಂಕಲ್ ನೀಡುತ್ತಿದ್ದ ಕಿರುಕುಳಕ್ಕೆ ಬೇಸತ್ತು 19 ವರ್ಷದ ವಿದ್ಯಾರ್ಥಿನಿಯೊಬ್ಬಳು ಸೂಸೈಡ್ ಮಾಡಿಕೊಂಡ ಘಟನೆ ಗದಗದಲ್ಲಿ ಜರುಗಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ವಿರಪಾಪೂರ ತಾಂಡಾದ ನಿವಾಸಿ ವಂದನಾ ಸೂಸೈಡ್ ಮಾಡಿಕೊಂಡ ವಿದ್ಯಾರ್ಥಿನಿ.
ಗ್ರಾಮ ಪಂಚಾಯತಿ ಹೊರಗುತ್ತಿಗೆ ಸಿಬ್ಬಂದಿಯಾಗಿರುವ 47 ವರ್ಷದ ಕಿರಣ ಕಾರಬಾರಿ ವಿರುದ್ಧ ಕಿರುಕುಳದ ಆರೋಪ ಕೇಳಿ ಬಂದಿದೆ. ಮೃತ ವಂದನಾ, ಜಿಮ್ಸ್ ನ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದರು. ಅಲ್ಲದೇ ಗದಗನ ಬೆಟಗೇರಿಯ ವಸಂತಸಿಂಗ್ ಜಮಾದಾರ ಬಡಾವಣೆಯ ಸಮಾಜಕಲ್ಯಾಣ ಹಾಸ್ಟೆಲ್ ನಲ್ಲಿ ಇದ್ದಳು. ಆದರೆ ಈಕೆಗೆ 47 ವರ್ಷದ ಕಿರಣ ಎಂಬಾತ ಮದುವೆಯಾಗುವಂತೆ ಕಿರುಕುಳ ಕೊಡುತ್ತಿದ್ದ.
ನಿತ್ಯವೂ ಫೋನ್ ಮಾಡಿ I Love You ಪ್ಲೀಸ್ Love Me, ಅಂತೆಲ್ಲಾ ಅಂಕಲ್ ಯುವತಿಯನ್ನು ಕಾಡುತ್ತಿದ್ದ. ಅಷ್ಟೇ ಅಲ್ಲ ನೀನು ನನ್ನ ಮದುವೆ ಆಗದಿದ್ದರೆ ಫೋಟೋಸ್ ಗಳನ್ನು ಎಡಿಟ್ ಮಾಡಿ ಸೋಷಿಯಲ್ ಮೀಡಿಯಾಗೆ ಅಪ್ಲೋಡ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಆರೋಪ ಕೇಳಿ ಬಂದಿದೆ. ಈ ಕಿರುಕುಳ ತಾಳಲಾರದೇ ವಂದನಾ ತಾನಿದ್ದ ಹಾಸ್ಟೆಲ್ ನಲ್ಲೇ ಪಿನಾಯಿಲ್ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೇ ಯುವತಿ ಸಾವನ್ನಪ್ಪಿದ್ದಾರೆ.
ವಂದನಾಳ ಸಾವಿಗೆ ಅಂಕಲ್ ಕಿರಣ ಕಾರಣ ಅಂತಾ ಯುವತಿ ಪೋಷಕರು ಆರೋಪ ಮಾಡಿದ್ದು, ಬೆಟಗೇರಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಾರೆ. ದೂರಿನ ಅನ್ವಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತನಿಖೆ ಚುರುಕುಗೊಳಿಸಿದ್ದಾರೆ.



