ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 4 ಪಂದ್ಯಗಳ ಟಿ2೦ ಸರಣಿಯಲ್ಲಿ ಭಾರತ 2-1 ಮುನ್ನಡೆಯಲ್ಲಿದೆ. ಇಂದು ಜೋಹಾನ್ಸ್‌ಬರ್ಗ್‌ನಲ್ಲಿ ನಡೆಯುವ ನಾಲ್ಕನೇ ಮತ್ತು ಅಂತಿಮ ಪಂದ್ಯವು ಸರಣಿಯ ಫಲಿತಾಂಶ ನಿರ್ಧರಿಸಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಜಿಯೋ ಸಿನಿಮಾ ಮತ್ತು ಸ್ಪೋರ್ಟ್ಸ್ 18 ಚಾನೆಲ್‌ಗಳಲ್ಲಿ ಲಭ್ಯವಿರುತ್ತದೆ. ಭಾರತ ತಂಡ ಗೆದ್ದರೆ ಸರಣಿ ಗೆಲ್ಲುತ್ತದೆ, ದಕ್ಷಿಣ ಆಫ್ರಿಕಾ ಗೆದ್ದರೆ ಸರಣಿ ಸಮಬಲವಾಗುತ್ತದೆ.
ಹೌದು ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಭಾರತೀಯ ಕಾಲಮಾನ ರಾತ್ರಿ 8:30ಕ್ಕೆ ಆರಂಭವಾಗಲಿದೆ. ರಾತ್ರಿ 8 ಗಂಟೆಗೆ ಟಾಸ್ ನಡೆಯಲಿದೆ. ಸರಣಿಯ ನಾಲ್ಕನೇ ಪಂದ್ಯವನ್ನು ಗೆದ್ದರೆ ಭಾರತಕ್ಕೆ ಸರಣಿ ಸಿಗಲಿದೆ. ಹೀಗಾಗಿ ಕೊನೆಯ ಪಂದ್ಯದ ಮೇಲೆ ಎಲ್ಲರ ಗಮನ ನೆಟ್ಟಿದ್ದು, ಭಾರತ ತಂಡ ಮತ್ತು ದಕ್ಷಿಣ ಆಫ್ರಿಕಾ ನಡುವಿನ ನಾಲ್ಕನೇ ಟಿ20 ಪಂದ್ಯವನ್ನು ಸ್ಪೋರ್ಟ್ಸ್ 18 ಚಾನೆಲ್‌ಗಳಲ್ಲಿ ವೀಕ್ಷಿಸಬಹುದು. ಇದರ ಲೈವ್ ಸ್ಟ್ರೀಮಿಂಗ್ ಅನ್ನು ಜಿಯೋ ಸಿನಿಮಾದಲ್ಲಿ ಉಚಿತವಾಗಿ ನೋಡಬಹುದು.
ಇನ್ನು ಇಂದಿನ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಆತಂಕ ಇದ್ದು ಪಂದ್ಯ ಆರಂಭದ ನಂತರ ಎಲ್ಲ ತಿಳಿದು ಬರಲಿದೆ. ಪಂದ್ಯದ ಆರಂಭದ ಬಳಿಕ ಶೇಕಡಾ 70 ರಷ್ಟು ಮಳೆ ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮೈದಾನದ ಸುತ್ತ ಗಾಳಿ 14 ಕಿ.ಮೀ ವೇಗದಲ್ಲಿ ಬೀಸಲಿದ್ದು ತೇವಾಂಶ ಶೇಕಡಾ 55ರಷ್ಟು ಇರಲಿದೆ. ಇನ್ನು ಪಂದ್ಯಕ್ಕೆ ವರುಣ ಆಗಮಿಸಿ ಮ್ಯಾಚ್ ರದ್ದಾದರೆ 2 ತಂಡಕ್ಕೂ ಪಾಯಿಂಟ್ಸ್ ಹಂಚಿಕೆ ಮಾಡಿದರು 2 ಪಂದ್ಯ ಗೆದ್ದಿರುವ ಭಾರತ ತೆಕ್ಕೆಗೆ ಸರಣಿ ಬರಲಿದೆ.
ಉಭಯ ತಂಡಗಳು
ಭಾರತ ತಂಡ: ಸೂರ್ಯಕುಮಾರ್ ಯಾದವ್ (ನಾಯಕ), ಅಭಿಷೇಕ್ ಶರ್ಮಾ, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ರಿಂಕು ಸಿಂಗ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಸರ್ ಪಟೇಲ್, ರಮಣದೀಪ್ ಸಿಂಗ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ವೈಶಾಕ್ ವಿಜಯಕುಮಾರ್, ಅವೇಶ್ ಖಾನ್, ಯಶ್ ದಯಾಳ್.
ದಕ್ಷಿಣ ಆಫ್ರಿಕಾ ತಂಡ: ಐಡೆನ್ ಮಾರ್ಕ್ರಾಮ್ (ನಾಯಕ), ಓಟ್ನಿಯಲ್ ಬಾರ್ಟ್‌ಮ್ಯಾನ್, ಜೆರಾಲ್ಡ್ ಕೊಯೆಟ್ಜಿ, ಡೊನೊವನ್ ಫೆರೀರಾ, ರೀಜಾ ಹೆಂಡ್ರಿಕ್ಸ್, ಮಾರ್ಕೊ ಯಾನ್ಸೆನ್, ಹೆನ್ರಿಚ್ ಕ್ಲಾಸೆನ್, ಪ್ಯಾಟ್ರಿಕ್ ಕ್ರುಗರ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಮಿಹಲಾಲಿ ಮಾಪೊಂಗ್ವಾನಾ, ನ್ಕಾಬಾ ಪೀಟರ್, ಆಂಡಿಲ್ ಸಿಮೆಲಾಬ್ಸ್, ಆಂಡಿಲೆ ರಿಕೆಲಾಬ್ಲಾಮ್ .