ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ನವದೆಹಲಿ: 2015 ರಿಂದ ಇಲ್ಲಿವರೆಗೆ ಪ್ರಧಾನಿ ನರೇಂದ್ರ ಮೋದಿ 58 ದೇಶಗಳಿಗೆ ಭೇಟಿ ನೀಡಿದ್ದು, ಅದಕ್ಕಾಗಿ ಸರ್ಕಾರದಿಂದ ತಗುಲಿದ ಖರ್ಚು 157.82 ಕೋಟಿ ರೂ. ಎಂದು ಕೇಂದ್ರ ಸರ್ಕಾರ ಮಂಗಳವಾರ ತಿಳಿಸಿದೆ.
ವಿದೇಶಂಗ ಖಾತೆಯ ರಾಜ್ಯ ಸಚಿವ ವಿ ಮುರಳಿಧರನ್, ಪ್ರಧಾನಿಯ ವಿದೇಶ ಪ್ರವಾಸ ಮತ್ತು ಅದರಿಂದಾದ ಫಲಶೃತಿಗಳ ಕುರಿತು ರಾಜ್ಯಸಭೆಗೆ ವಿವರ ನೀಡುವಾಗ ಮೇಲಿನ ಮಾಹಿತಿಯನ್ನು ನೀಡಿದ್ದಾರೆ.
ಪ್ರಧಾನಿ ಅಮೆರಿಕ, ಚೀನಾ ಮತ್ತು ರಷ್ಯಾಗಳಿಗೆ ತಲಾ 5 ಸಲ ಭೇಟಿ ನೀಡಿದ್ದಾರೆ. ಇನ್ನು ಹಲವು ದೇಶಗಳಿಗೆ ಹಲವಾರು ಸಲ ಭೇಟಿ ನೀಡಿದ್ದಾರೆ. ಕೆಲವೊಮ್ಮೆ ಏಕಕಾಲಕ್ಕೆ ಹಲವು ದೇಶಗಳನ್ನು ಸುತ್ತಿ ಬಂದಿದ್ದರೆ, ಇನ್ನು ಕೆಲವು ಸಲ ದ್ವಿಪಕ್ಷಿಯ ಮಾತುಕತೆಗಾಗಿ ಒಂದೇ ದೇಶಕ್ಕೆ ಹೋಗಿ ಬಂದಿದ್ದಾರೆ.
ಅಂದಂತೆ, ಅವರ ಕೊನೆಯ ಭೇಟಿ 2019 ರ ನವಂಬರ್ 13-14ರಂದು ಬ್ರೆಜಿಲ್‌ಗೆ ಭೇಟಿ ನೀಡಿದ್ದು. ಅಂದರೆ 5 ವರ್ಷದಲ್ಲಿ ಅವರು 58 ದೇಶ ಸಂದರ್ಶಿಸಿ,517.82 ಕೋಟಿ. ರೂ ಖರ್ಚು ಮಾಡಿದ್ದಾರೆ!
ಅದರಿಂದ ಸಾಕಷ್ಟು ಲಾಭವಾಗಿವೆ ಎಂದು ಸರ್ಕಾರ ಹೇಳಿದೆಯಾದರೂ, ವಾಸ್ತವದಲ್ಲಿ ಎಷ್ಟು ಪ್ರಾಜೆಕ್ಟ್ ಗಳು ಕಾರ್ಯಾರಂಭ ಮಾಡಿವೆ ಎಂಬ ವಿವರವಿಲ್ಲ.
ಚೀನಾಕ್ಕೆ ಅವರು 5 ಸಲ ಭೇಟಿ ನೀಡಿದ್ದು, ಚೀನಾ ಪ್ರಧಾನಿ ಇಲ್ಲಿಗೆ 2 ಸಲ ಬಂದಿದ್ದು ನೋಡಿದ ಮೇಲೆ ಅದರ ಫಲಶೃತಿ ಇಷ್ಟೇನಾ ಎಂಬ ಪ್ರಶ್ನೆ ಕಾಡದೇ ಇರದು!