ಬೆಳಗಾವಿ: ಬೆಳಗಾವಿ ಜಿಲ್ಲೆಯ ಮಹಾಲಿಂಗಪುರದಲ್ಲಿ 2023ರ ಅಕ್ಟೋಬರ್ನಲ್ಲಿ ನಡೆದ ಅತ್ಯಾಚಾರ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ. ಮಸೀದಿಯಲ್ಲಿ ಮೌಲ್ವಿಯೊಬ್ಬ 5 ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಈ ಘೋರ ಘಟನೆ ಸಿಸಿಟಿವಿ ದೃಶ್ಯಗಳ ಮೂಲಕ ಬಹಿರಂಗೊಂಡಿದೆ.
ಮಹಾಲಿಂಗಪುರದ 22 ವರ್ಷದ ಮೌಲ್ವಿ ತುಫೇಲ್ ಅಹ್ಮದ್ ದಾದಾಪೀರ್ ಆರೋಪಿಯಾಗಿದ್ದು, ಬಾಲಕಿ ಮೇಲೆ ಅತ್ಯಾಚಾರ ಎಸಗುವ ಕೃತ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆ ಆಗಿದೆ.
ಘಟನೆ ನಡೆದು ಎರಡು ವರ್ಷ ಕಳೆದರೂ ಭಯ ಪಟ್ಟು ಬಾಲಕಿ ಪೋಷಕರು ಕೇಸ್ ನೀಡಿರಲ್ಲಿ. ವಿಡಿಯೋ ಸಿಗುತ್ತಿದ್ದಂತೆ ಪೊಲೀಸರೇ ಬಾಲಕಿ ತಂದೆಯ ಮನವೊಲಿಸಿ ಕೇಸ್ ದಾಖಲಿಸಿದ್ದಾರೆ. ಪುನೀತ್ ಕೆರೆಹಳ್ಳಿ ಎಂಬ ಎಕ್ಸ್ ಖಾತೆಯಲ್ಲಿ ವಿಡಿಯೋ ವೈರಲ್ ಆಗಿತ್ತು. 2023 ಅಕ್ಟೋಬರ್ 5ರಂದು ಬೆಳಗಾವಿ ಜಿಲ್ಲೆಯ ಯರಗಟ್ಟಿಯ ಮಸೀದಿ ಒಂದರಲ್ಲಿ ಹೆಣ್ಣು ಮಗುವಿನ ಮೇಲೆ ನಡೆದಿರುವ ಈ ಅತ್ಯಾಚಾರಕ್ಕೆ ಆ ಮಗುವಿನ ತಂದೆ ನ್ಯಾಯ ಕೇಳುತ್ತಿದ್ದಾರೆ.
ಮಸೀದಿಯವರು ಇವರನ್ನು ಹೆದರಿಸಿ ದೂರು ಕೊಡದಂತೆ ತಡೆದಿದ್ದಾರಂತೆ. ಈಗಳು ಆ ವ್ಯಕ್ತಿ ನ್ಯಾಯಕ್ಕಾಗಿ ಕಾಯುತ್ತಿದ್ದಾರೆ. ದಯವಿಟ್ಟು ಕೂಡಲೇ ತನಿಖೆ ಮಾಡಿ ಕ್ರಮ ಜರುಗಿಸಿ ಆ ಹೆಣ್ಣು ಮಗುವಿಗೆ ನ್ಯಾಯ ಕೊಡಿಸಬೇಕೆಂದು ಕೇಳಿಕೊಳ್ಳುತ್ತಿದ್ದೇನೆ. ತಂದೆಯ ಹೆಸರು ಕುತುಬುದ್ದೀನ್ ಎಂದು ಪೋಸ್ಟ್ ಮಾಡಲಾಗಿತ್ತು. ಸದ್ಯ ಆರೋಪಿಯನ್ನು ಬಂಧಿಸಿದ ಮುರಗೋಡ ಪೊಲೀಸರು ಹಿಂಡಲಗಾ ಜೈಲಿಗಟ್ಟಿದ್ದಾರೆ.