ಬೆಂಗಳೂರು:– 2023ರಲ್ಲಿ ನೀಡಿದಂತೆ ಈ ಬಾರಿಯೂ ಕರ್ನಾಟಕ ಸಾರಿಗೆ ಇಲಾಖೆ ಟ್ರಾಫಿಕ್ ಫೈನ್ಗೆ 50 ರಷ್ಟು ರಿಯಾಯಿತಿ ನೀಡಿ ಪಾವತಿ ಮಾಡಲು ಅವಕಾಶ ನೀಡಿದ್ದು,ಸವಾರರಿಂದ ಭರ್ಜರಿ ರೆಸ್ಪಾನ್ಸ್ ಸಿಗುತ್ತಿದೆ.
ಮಾಧ್ಯಮ ಪ್ರಕಟಣೆಯ ಪ್ರಕಾರ ಬೆಂಗಳೂರಿನಲ್ಲಿ, 50% ರಿಯಾಯಿತಿ ನೀಡಿದ ಮೊದಲ ದಿನವೇ ಭಾರಿ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಆಗಸ್ಟ್ 23ರಂದು ನಗರದಾದ್ಯಂತ 1,48,747 ಪ್ರಕರಣಗಳನ್ನು ಇತ್ಯರ್ಥಪಡಿಸಲಾಗಿದ್ದು, ಒಟ್ಟು 4,18,20,500 ರೂ ಹಣ ಸಂಗ್ರಹವಾಗಿತ್ತು.
ಆಗಸ್ಟ್ 23 ರಂದು 882 ವಾಹನ ಮಾಲೀಕರು ಪಾವತಿಸುವ ಮೂಲಕ 2.23 ಲಕ್ಷ ರೂ, ಆಗಸ್ಟ್ 24 ರಂದು 1,229 ವಾಹನ ಮಾಲೀಕರು ಪಾವತಿಸುವ ಮೂಲಕ 3.09 ಲಕ್ಷ ರೂ, ಆಗಸ್ಟ್ 25 ರಂದು 1,370 ವಾಹನ ಮಾಲೀಕರು ಪಾವತಿಸುವ ಮೂಲಕ 3.49 ಲಕ್ಷ ರೂ ಬಾಕಿ ದಂಡವನ್ನು ಸಂಗ್ರಹಿಸಲಾಗಿದೆ. ಒಟ್ಟಾರೆ ನಾಲ್ಕು ದಿನಗಳಲ್ಲಿ 5,25,551 ವಾಹನ ಮಾಲೀಕರು 14,89,36,300 ರೂ ಬಾಕಿ ದಂಡ ಕಟ್ಟಿದ್ದಾರೆ. ಸೆಪ್ಟೆಂಬರ್ 9ರ ವರೆಗೆ 50% ರಿಯಾಯಿತಿ ಬಾಕಿ ದಂಡ ಪಾವತಿಸಲು ಅವಕಾಶವಿದೆ.