ಬೆಂಗಳೂರು:- ಸ್ಪೀಕರ್ ಪೀಠಕ್ಕೆ ಅಗೌರವ ತೋರಿದ 18 ಬಿಜೆಪಿ ಶಾಸಕರನ್ನ 6 ತಿಂಗಳು ಅಮಾನತು ಮಾಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಪ್ರದೀಪ್ ಈಶ್ವರ್ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಕುರಿತಂತೆ ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್, ಬಿಜೆಪಿ ಶಾಸಕರು ಮಾಡಿರೋದಕ್ಕೆ 6 ತಿಂಗಳವರೆಗೆ ಅಮಾನತು ಮಾಡಿರುವುದು ಸ್ಪೀಕರ್ ಸ್ಥಾನದ ಗೌರವ ಹೆಚ್ಚಿಸಿದೆ ಎಂದರು.
ಸ್ಪೀಕರ್ ಮೇಲೆ ಪೇಪರ್ ಎಸೆದರೆ ಸುಮ್ಮನಿರಬೇಕಾ? ಬಿಜೆಪಿಯವರಿಗೆ ನಮ್ ಜೊತೆ ಫೈಟ್ ಮಾಡೋಕೆ ಆಗ್ತಿಲ್ಲ. ಯಾವತ್ತಾದ್ರೂ ಬಡವರ ಕಷ್ಟ ಕೇಳಿದ್ದೀರಾ? ನಿಮಗೆ ಜನರ ಕಷ್ಟ ಬೇಕಾಗಿಲ್ಲ. ಯಾವ್ಯಾವುದೋ ವಿಷಯ ಇಟ್ಕೊಂಡಿದ್ದಾರೆ. ನಾನ್ ಏನಾದರೂ ಸ್ಪೀಕರ್ ಸ್ಥಾನದಲ್ಲಿದಿದ್ದರೆ 2 ವರ್ಷ ಸಸ್ಪೆಂಡ್ ಮಾಡ್ತಿದ್ದೆ. ಅಲ್ದೇ ಸ್ಪೀಕರ್ ಅವರು 50ಜನರನ್ನು ಅಮಾನತು ಮಾಡ್ತಾರೆ ಅಂದ್ಕೊಂಡಿದ್ದೆ. ಆದ್ರೆ ಸ್ಪೀಕರ್ 18 ಜನರನ್ನು ಮಾಡಿದ್ದಾರೆ. ಶಾಸಕರನ್ನ ಅಮಾನತು ಮಾಡಿರೋದು ಸರಿ ಇದೆ ಎಂದು ಪ್ರದೀಪ್ ಈಶ್ವರ್ ಸಮರ್ಥಿಸಿಕೊಂಡರು.



