HomeGadag News59ನೇ ವರ್ಷದ ಉಚಿತ ಅಸ್ತಮಾ ಯಜ್ಞ

59ನೇ ವರ್ಷದ ಉಚಿತ ಅಸ್ತಮಾ ಯಜ್ಞ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಪಟ್ಟಣದಲ್ಲಿ ಕಳೆದ 58 ವರ್ಷಗಳಿಂದ ಅಸ್ತಮಾ ರೋಗಿಗಳಿಗೆ ಉಚಿತವಾಗಿ ಮಂತ್ರೌಷಧಿಯನ್ನು ವಿತರಿಸುವ ಮೂಲಕ ಲಕ್ಷ್ಮೇಶ್ವರದ ಕೀರ್ತಿಯನ್ನು ದೇಶದ ಉದ್ದಗಲಕ್ಕೂ ಹಬ್ಬುವಂತೆ ಮಾಡಿದ್ದ ದಿ. ಡಾ.ವೈದ್ಯಬಾಬುರಾವ್ ಕುಲಕರ್ಣಿ ಇವರ ಸೇವೆ ಅಪಾರವಾಗಿದ್ದು, ಅವರು ಹಾಕಿಕೊಟ್ಟ ಮಾರ್ಗದಲ್ಲಿ ಈ ಉಚಿತ ಔಷಧಿ ವಿತರಣೆ ಕಾರ್ಯಕ್ರಮವನ್ನ ಯಶಸ್ವಿಯಾಗಿ ನಡೆಸಿಕೊಂಡು ಹೋಗುವ ಜವಾಬ್ದಾರಿ ಎಲ್ಲರ ಮೇಲಿದೆ ಎಂದು ಪುರಸಭೆ ಮಾಜಿ ಅಧಕ್ಷ ವಿ.ಜಿ. ಪಡಗೇರಿ ಹೇಳಿದರು.

ಅವರು ರವಿವಾರ ಸಂಜೆ ದಿ. ವೈದ್ಯ ಬಾಬುರಾವ್ ಕುಲಕರ್ಣಿಯವರ ನಿವಾಸದಲ್ಲಿ 59ನೇ ವರ್ಷದ ಉಚಿತ ಅಸ್ತಮಾ ವಿತರಣಾ ಕಾರ್ಯಕ್ರಮದ ಅಂಗವಾಗಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.

ಈ ಬಾರಿ ಜೂನ್ 8ರಂದು ಮದ್ಯಾಹ್ನ 1 ಗಂಟೆ 23 ನಿಮಿಷಕ್ಕೆ ಮೃಗಶಿರಾ ಮಳೆಯ ಪ್ರವೇಶ ಕಾಲದಲ್ಲಿ ಡಾ. ಹರೀಶ ಕುಲಕರ್ಣಿ ಅವರ ನೇತೃತ್ವದಲ್ಲಿ ಲಕ್ಷ್ಮೇಶ್ವರದ ಸರಕಾರಿ ಪ್ರಾಥಮಿಕ ಶಾಲೆ ನಂ.1ರ ಆವರಣದಲ್ಲಿ 59ನೇ ವರ್ಷದ ಉಚಿತ ಅಸ್ಥಮಾ ಯಜ್ಞ ನಡೆಯಲಿದ್ದು, ಆಗಮಿಸುವ ರೋಗಿಗಳಿಗೆ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡು ಹೋಗುವದು ಎಲ್ಲರ ಕರ್ತವ್ಯವಾಗಿದೆಯಲ್ಲದೆ, ಸೇವೆಯ ರೂಪದಲ್ಲಿ ಯಶಸ್ವಿಗೊಳಿಸಬೇಕಾಗಿದೆ ಎಂದು ಹೇಳಿದರು.

ಪೂರ್ವಭಾವಿ ಸಭೆಯ ಅಧ್ಯಕ್ಷತೆಯನ್ನು ಪಲ್ಲಣ್ಣನವರು ಕುಲಕರ್ಣಿ ವಹಿಸಿದ್ದರು. ಡಾ. ಹರೀಶ ಕುಲಕರ್ಣಿ, ಪುಟ್ಟಪ್ಪ ಕೋರಿ, ಗಂಗಪ್ಪ ದುರಗಣ್ಣವರ, ಕರಿಯಪ್ಪ ಉಳ್ಳಟ್ಟಿ, ನಾಗರಾಜ ಕೋರಿ, ನಿಂಗಪ್ಪ ಕಲ್ಯಾಣಿ, ಬಸವರಾಜ ಗುಡಗುಂಟಿ, ಕೃಷ್ಣ ಕ್ಷತ್ರಿ, ನೀಲಪ್ಪ ಬಲೇಶಿ, ಪಾಪಣ್ಣ ಬನ್ನಿ ಮುಂತಾದವರು ಹಾಜರಿದ್ದು ಕಾರ್ಯಕ್ರಮದ ಯಶಸ್ವಿಗೆ ಸಲಹೆ ಸೂಚನೆ ನೀಡಿದರು.

ಎಂ.ಆರ್. ಪಾಟೀಲ, ಗೋಪಾಲ ಪಡ್ನೀಸ್, ನಿಂಗಪ್ಪ ಬನ್ನಿ ಮಾತನಾಡಿ, ಇಂತಹದೊAದು ಮಹತ್ವದ ಕಾರ್ಯ ಜರುಗಬೇಕಾದರೆ ಅದಕ್ಕೆ ಸಮಾಜದ ಸಹಕಾರ ಅತಿ ಮುಖ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಲಕ್ಷ್ಮೇಶ್ವರದ ಸಮಸ್ತ ಜನರು ಕಳೆದ 58 ವರ್ಷಗಳಿಂದ ಈ ಅಸ್ತಮಾ ಔಷಧಿ ವಿತರಣೆ ಕಾರ್ಯಕ್ಕೆ ಸಹಾಯ-ಸಹಕಾರ ನೀಡುತ್ತಿರುವದರಿಂದ ಇದೊಂದು ದೊಡ್ಡ ಕಾರ್ಯಕ್ರಮವಾಗಿ ನಡೆಯಲು ಸಾಧ್ಯವಾಗಿದ್ದು, ಇದೊಂದು ಧಾರ್ಮಿಕ ಕಾರ್ಯಕ್ರಮವಾಗಿ ಬೆಳೆಯುತ್ತಿದೆ. ಪುರಸಭೆಯಿಂದ ಅವಶ್ಯಕ ಸೇವೆಗಳನ್ನು ದೊರಕಿಸುವದು, ಬಂದ ಜನರಿಗೆ ಸರಿಯಾಗಿ ಕುಡಿಯುವ ನೀರು, ಔಷಧಿ, ಸ್ವಚ್ಛತೆ, ಸಾರಿಗೆ, ಪ್ರಸಾದ, ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸುವ ನಿಟ್ಟಿನಲ್ಲಿ ಕೆಲಸ ನಿರ್ವಹಿಸುವದಾಗಿ ಹೇಳಿದರು.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!