ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ
Advertisement
ಸೂಕ್ತ ದಾಖಲೆ ಇಲ್ಲದೇ ಸರಕಾರಿ ಬಸ್‌ನಲ್ಲಿ ಸಾಗಿಸುತ್ತಿದ್ದ 5ಲಕ್ಷ ರೂ ಹಣವನ್ನು ತಾಲೂಕಿನ ರಾಮಗೇರಿ ಚೆಕ್‌ಪೋಸ್ಟ್ ನಲ್ಲಿ ಗುರುವಾರ ಚುನಾವಣಾಧಿಕಾರಿಗಳು ವಶಪಡಿಸಿಕೊಂಡಿದ್ದಾರೆ.
ಹುಬ್ಬಳ್ಳಿಯಿಂದ ಲಕ್ಷ್ಮೇಶ್ವರ ಕಡೆ ಬರುತ್ತಿದ್ದ ಕೆಎಸ್‌ಆರ್‌ಟಸಿ ಬಸ್‌ನಲ್ಲಿ ತಪಾಸಣೆ ವೇಳೆ 5ಲಕ್ಷ ರೂ ಹಣವನ್ನು ಅಧಿಕಾರಿಗಳು ವಶಪಡಿಸಿಕೊಂಡಿದ್ದಾರೆ. ಧಾರವಾಡ ಜಿಲ್ಲೆಯ ಮುಗದ ಗ್ರಾಮದ ಸಯ್ಯದ್ ಅಬ್ದುಲ್‌ರಜಾಕ್ ಪೀರಜಾಧೆ ಎಂಬುವರು ಸೂಕ್ತ ದಾಖಲೆ ಇಲ್ಲದೇ ಹಣ ಸಾಗಿಸುತ್ತಿದ್ದರು.
ತಹಸೀಲ್ದಾರ, ವಾಸುದೇವ ಸ್ವಾಮಿ, ಸಿಪಿಐ ನಾಗರಾಜ್ ಮಾಡಳ್ಳಿ, ಪಿಎಸ್‌ಐ ಈರಪ್ಪ ರಿತ್ತಿ, ವಿನಾಯಕ ವೇತಾಳ, ಮಾರುತಿ ರಾಠೋಡ ಸೇರಿ ಪೊಲೀಸ್, ಕಂದಾಯ ಸಿಬ್ಬಂದಿಗಳು ಇದ್ದರು.
ಪ್ರತ್ಯೇಕ ಪ್ರಕರಣದಲ್ಲಿ 7ಲೀಟರ್ ಮದ್ಯವನ್ನು ವಶಪಡಿಸಿಕೊಂಡಿದ್ದಾರೆ. ಈ ಕುರಿತು ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.