ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ನಗರದ ಲಯನ್ಸ್ ಶಾಲೆಯಲ್ಲಿ ಜರುಗಿದ 5ನೇ ಗ್ರುಪ್ ಮಟ್ಟದ ಕ್ರೀಡಾಕೂಟದಲ್ಲಿ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ತೋಂಟದಾರ್ಯ ಕನ್ನಡ ಹಾಗೂ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ.
ವಯಕ್ತಿಕ ಆಟಗಳಗಳಾದ 400 ಮೀ ಹಾಗೂ 600 ಮೀ ಓಟದ ಸ್ಪರ್ಧೆಯಲ್ಲಿ ಖುಷಿ ಕಬಾಡಿ ಪ್ರಥಮ, 100 ಮೀ ಓಟದಲ್ಲಿ ಮನೋಜ ಬಾಬನಿ ತೃತೀಯ, 80 ಮೀ ಅಡೆತಡೆ ಓಟದಲ್ಲಿ ಮಹಮ್ಮದ ಯಾಸೀನ್ ತೃತೀಯ ಸ್ಥಾನ ಗಳಿಸಿದ್ದಾರೆ. ಬಾಲಕಿಯರ ವಿಭಾಗದ ಚಕ್ರ ಎಸೆತದಲ್ಲಿ ಇಂದುಶ್ರೀ ದುಂಡಸಿ ಪ್ರಥಮ, ಚೈತ್ರಾ ಬಳ್ಳಾರಿ ದ್ವಿತೀಯ, ಬಾಲಕರ ವಿಭಾಗದ ಚಕ್ರ ಎಸೆತದಲ್ಲಿ ಆಯುಷಕುಮಾರ ಕುಂದಾಪೂರ ಪ್ರಥಮ, ಪವನಕಲ್ಯಾಣ ನಾಗನೂರ ದ್ವಿತೀಯ ಸ್ಥಾನ ಗಳಿಸಿದ್ದಾರೆ.
ಗುಂಡು ಎಸೆತದಲ್ಲಿ ರುಕ್ಮಿಣಿ ನಾಗನೂರ ದ್ವಿತೀಯ, ಉದ್ದ ಜಿಗಿತದಲ್ಲಿ ಪೈಜಾನ್ ನಿಟ್ಟಾಲಿ ಪ್ರಥಮ, ಸ್ನೇಹಾ ಗುತ್ತಮ್ಮನವರ ದ್ವಿತೀಯ ಸ್ಥಾನ ಗಳಿಸಿದ್ದಾರೆ. ಎತ್ತರ ಜಿಗಿತದಲ್ಲಿ ಖುಷಿ ಕಬಾಡಿ, ಶ್ರೀಲೇಖಾ ತಮರಳ್ಳಿ ದ್ವಿತೀಯ, ಮಹಮ್ಮದ್ ಫೈಜಾನ್ ದ್ವಿತೀಯ, ಯಾಸಿನ್ ಬಳ್ಳಾರಿ ತೃತೀಯ ಸ್ಥಾನ ಗಳಿಸಿದ್ದಾರೆ.
ಗುಂಪು ಆಟಗಳ ವಿಭಾಗದಲ್ಲಿ ಮಹಮ್ಮದ್ ಫೈಜಾನ್ ಹಾಗೂ ತಂಡ ಬಾಲಕರ ರೀಲೆ ಸ್ಪರ್ಧೆಯಲ್ಲಿ ದ್ವಿತೀಯ, ಸಹನಾ ಬೆಂಗಳೂರು ತಂಡ ಬಾಲಕಿಯರ ರೀಲೆ ಸ್ಪರ್ಧೆಯಲ್ಲಿ ದ್ವಿತೀಯ, ಇಂದುಶ್ರೀ ದುಂಡಸಿ ಬಾಲಕಿಯರ ಥ್ರೋಬಾಲ್‌ನಲ್ಲಿ ಪ್ರಥಮ, ನವೀನ್ ತಂಡ ಬಾಲಕರ ಥ್ರೋಬಾಲ್ ಸ್ಪರ್ಧೆಯಲ್ಲಿ ಪ್ರಥಮ, ವಾಲಿಬಾಲ್ ಸ್ಪರ್ಧೆಯಲ್ಲಿ ಮನೋಜ ಕುಮಾರ ಪತ್ತಾರ ತಂಡ ಪ್ರಥಮ ಸ್ಥಾನ ಗಳಿಸಿದ್ದಾರೆ.
ಪ್ರಶಸ್ತಿ ಗಳಿಸಿದ ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ತೋಂಟದಾರ್ಯ ಶಿಕ್ಷಣ ಸಂಸ್ಥೆಯ ಚೇರಮನ್ ಎಸ್.ಎಸ್. ಪಟ್ಟಣಶೆಟ್ಟರ, ಕಾರ್ಯದರ್ಶಿ ಕೊಟ್ರೇಶ ಮೆಣಸಿನಕಾಯಿ, ಪ್ರಾಥಮಿಕ ಶಾಲಾ ವಿಭಾಗದ ಮುಖ್ಯೋಪಾಧ್ಯಾಯ ಎನ್.ವ್ಹಿ. ಗಾಳಿ, ದೈಹಿಕ ಶಿಕ್ಷಕರಾದ ಎಫ್.ಆರ್. ದೊಡ್ಡಣ್ಣವರ ಸೇರಿದಂತೆ ಶಿಕ್ಷಕ ವೃಂದದವರು ಅಭಿನಂದನೆ ಸಲ್ಲಿಸಿದ್ದಾರೆ.
ಗ್ರುಪ್ ಆಟಗಳಲ್ಲಿ 600, 400 ಮೀ ಓಟ ಹಾಗೂ ಎತ್ತರ ಜಿಗಿತದಲ್ಲಿ ಪ್ರಥಮ ಸ್ಥಾನ ಗಳಿಸಿ ಅಪ್ರತಿಮ ಸಾಧನೆ ತೋರಿದ ತೋಂಟದಾರ್ಯ ಶಾಲೆಯ 7ನೇ ತರಗತಿಯ ವಿದ್ಯಾರ್ಥಿನಿ ಖುಷಿ ಕಬಾಡಿ `ಸಮಗ್ರ ವೀರಾಗ್ರಣಿ’ ಪ್ರಶಸ್ತಿಯನ್ನು ತನ್ನ ಮುಡಿಗೇರಿಸಿಕೊಂಡರು.