ಭಿಕ್ಷುಕನ ಬ್ಯಾಗ್ ನಲ್ಲಿ ಪತ್ತೆಯಾಯ್ತು 60,000 ದಷ್ಟು ಹಣ..!

0
Spread the love

ತುಮಕೂರು: ಭಿಕ್ಷುಕನ ಬ್ಯಾಗ್ ನಲ್ಲಿ ಪತ್ತೆಯಾಯ್ತು ಸಾವಿರ‌,ಸಾವಿರ ಹಣ ಇದೆ ಅಂದರೆ ನೀವು ನಂಬುತ್ತಿರಾ..? ನೀವು ನಂಬಲೇಬೇಕು. ಯಾಕಂದ್ರೆ ಈ ಸ್ಟೋರಿ ನೋಡಿ.. ಗಾಂಜಾ ಸೊಪ್ಪು ಇರಬಹುದು ಅಂತಾ ಭಿಕ್ಷುಕನ ಬ್ಯಾಗ್ ಚೆಕ್ ಮಾಡಿದ ಪೊಲೀಸರೇ ದಂಗಾಗಿರುವ ಘಟನೆ ತುಮಕೂರು‌ ಜಿಲ್ಲೆ ಕೊರಟಗೆರೆ ತಾಲ್ಲೂಕಿನ ಮರೇನಾಯಕನಹಳ್ಳಿಯಲ್ಲಿ ನಡೆದಿದೆ. ಹೌದು

Advertisement

ಹೌದು ವ್ಯಕ್ತಿ ಹೆಸರು ಗುರುಸಿದ್ದಪ್ಪ ಅಸಲಿಗೆ ಕೊರಟಗೆರೆ ತಾಲ್ಲೂಕಿನ ಹೊಸಹಳ್ಳಿ ಗ್ರಾಮದವನಾಗಿರುವ ಗುರುಸಿದ್ದಪ್ಪ ಸುಮಾರು 10 ವರ್ಷಗಳ ಹಿಂದೆ ಯಾವುದೋ ಕಾರಣಕ್ಕೆ ಹೆಂಡತಿ ಜೊತೆ ಜಗಳ ಮಾಡಿ ಮನೆಬಿಟ್ಟು ಹೊರಬಂದವನು ಕೊರಟಗೆರೆ, ತುಮಕೂರು, ಗುಬ್ಬಿ ಮೊದಲಾದ ಕಡೆ ಭಿಕ್ಷೆ ಬೇಡಿಕೊಂಡು ಬದುಕು ಕಳೆಯುತ್ತಿದ್ದ.

ಆದರೆ ಕೊರಟಗೆರೆಯ ಕೆಲ ಜನಕ್ಕೆ ಗುರುಸಿದ್ದಪ್ಪ ಗಾಂಜಾ ಮಾರಾಟ ಮಾಡುವ ಶಂಕೆ ಮೂಡಿ ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ಪೊಲೀಸರು ಅವನನ್ನು ಹಿಡಿದು ತಪಾಸಣೆ ನಡೆಸಿದಾಗ ಅವನ ಬಳಿ ಗಾಂಜಾವೇನೂ ಪತ್ತೆಯಾಗಿಲ್ಲ ಆದರೆ ಭಿಕ್ಷೆಯ ಮೂಲಕ ಸಂಗ್ರಹಿಸಿದ್ದ ರೂ 60,000 ದಷ್ಟು ಹಣ ಸಿಕ್ಕಿದೆ.

ವಿಚಾರಣೆ ನಡೆಸಿದಾಗ ಗುರುಸಿದ್ದಪ್ಪ ತನ್ನ ಹಿನ್ನೆಲೆಯ ಬಗ್ಗೆ ಹೇಳಿದ್ದಾನೆ. ಪೊಲೀಸರು ಅವನ ಹೆಂಡತಿಯನ್ನು ಕರೆಸಿ ಜೊತೆ ಮಾಡಿ, ಮತ್ತೇ ಜಗಳ ಮಾಡದಂತೆ ಬುದ್ಧಿವಾದ ಹೇಳಿ ಅವನ ಗಳಿಸಿದ್ದ ಹಣದೊಂದಿಗೆ ಹೊಸಹಳ್ಳಿಗೆ ಕಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here