ವಿಜಯಸಾಕ್ಷಿ ಸುದ್ದಿ, ಗದಗ : ಪ್ರಗತಿಪಥದಲ್ಲಿ ಮುನ್ನಡೆದಿರುವ ಆಝಾದ ಕೋ-ಆಪ್ ಬ್ಯಾಂಕ್ ಲಿಮಿಟೆಡ್ ಗದಗ ಲಾಭದಲ್ಲಿದ್ದು, ಶೇರುದಾರರಿಗೆ ಶೇ. 12 ಡಿವ್ಹಿಡೆಂಡ್ ನೀಡಲಿದೆ ಎಂದು ಬ್ಯಾಂಕ್ ಚೇರಮನ್ ಹಾಜಿ ಸರಫರಾಜಅಹ್ಮದ್ ಎಸ್.ಉಮಚಗಿ ಹೇಳಿದರು.
ಅವರು ರವಿವಾರ ಬ್ಯಾಂಕ್ ಸಭಾಂಗಣದಲ್ಲಿ ನಡೆದ ಬ್ಯಾಂಕ್‌ನ 63ನೇ ವಾರ್ಷಿಕ ಸಾಧಾರಣ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಸಾಲ ಪಡೆದವರು ಬ್ಯಾಂಕ್‌ಗೆ ಸಾಲವನ್ನು ಮರುಪಾವತಿ ಮಾಡಬೇಕು. ಅಂದಾಗ ಮಾತ್ರ ಬ್ಯಾಂಕ್ ಪ್ರಗತಿಯಾಗುವದು, ಜೊತೆಗೆ ಇನ್ನೊಬ್ಬರಿಗೆ ಸಾಲ ನೀಡಲು ಅನುಕೂಲವಾಗುವದು ಎಂದರು.
ಬ್ಯಾಂಕ್‌ಗೆ 5,635 ಜನ ಸದಸ್ಯರಿದ್ದು 300.63 ಲಕ್ಷ ರೂ. ಶೇರು ಬಂಡವಾಳ, 7908.65 ಲಕ್ಷ ರೂ.ಠೇವು ಹೊಂದಿದ್ದು ಠೇವುಗಳ ಮೇಲೆ ವಿಮಾ ನಿಗಮದ ವಿಮಾ ಭದ್ರತೆ ಇದೆ. ದುಡಿಯುವ ಬಂಡವಾಳ 9204.75 ಲಕ್ಷ ರೂ. ಆಗಿದೆ. ಬ್ಯಾಂಕ್ ಪ್ರಸಕ್ತ ಸಾಲಿನಲ್ಲಿ 107.32 ಲಕ್ಷ ರೂ. ಲಾಭಗಳಿಸಿದ್ದು ಶೇರುದಾರರಿಗೆ ಶೇ. 12 ರಷ್ಟು ಡಿವ್ಹಿಡೆಂಡ್ ನೀಡಲಿದೆ ಎಂದರು.
ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಡಾ.ಅವಿನಾಶ ಓದುಗೌಡರ ಮಾತನಾಡಿ, ಜನರು ಹಣ ಮತ್ತು ಆರೋಗ್ಯವನ್ನು ಸರಿಯಾಗಿ ಕಾಯ್ದುಕೊಳ್ಳಬೇಕು. ಆರೋಗ್ಯ ಸರಿಯಾಗಿದ್ದರೆ ಹಣ, ಹಣ ಇದ್ದರೂ ಆರೋಗ್ಯ ಸರಿಯಾಗಿಲ್ಲದಿದ್ದರೆ ಆ ಹಣ ವ್ಯರ್ಥವಾಗಿ ಖರ್ಚಾಗುವದು. ಹಣ-ಆರೋಗ್ಯ ಎರಡನ್ನೂ ಸರಿಯಾಗಿ ನಿಭಾಯಿಸಬೇಕೆಂದರು.
ಮ್ಯಾನೇಜಿಂಗ್ ಡೈರೆಕ್ಟರ್ ಎ.ಜಿ. ಯರಗುಡಿ ಸ್ವಾಗತಿಸಿ ಸಭೆಯ ವಿಷಯ ಮಂಡಿಸಿದರು. ಶಾಖಾ ವ್ಯವಸ್ಥಾಪಕ ಆರ್.ಎಂ. ನದಾಫ್ ಲೆಕ್ಕಪರಿಶೋಧನಾ ವರದಿ ಪ್ರಸ್ತುತಪಡಿಸಿದರು. ಬ್ಯಾಂಕ್‌ನ ನಿರ್ದೇಶಕರಾದ ಎಂ.ಎ. ಹಣಗಿ ನಿವ್ವಳ ಲಾಭ ಹಂಚಿಕೆ ವಿವರಣೆ ನೀಡಿದರು. ಪ್ರಧಾನ ಕಚೇರಿಯ ವ್ಯವಸ್ಥಾಪಕ ಯಾಸೀನ ಹುಬ್ಬಳ್ಳಿ ವಾರ್ಷಿಕ ಬಜೆಟ್ ಮಂಡಿಸಿ ಎಲ್ಲ ವಿಷಯಗಳಿಗೆ ಸರ್ವಾನುಮತದಿಂದ ಮಂಜೂರು ಪಡೆದರು.
ವೇದಿಕೆಯ ಮೇಲೆ ಬ್ಯಾಂಕಿನ ಉಪಾಧ್ಯಕ್ಷ ಹುಲಗಣ್ಣ ಬಳ್ಳಾರಿ, ನಿರ್ದೇಶಕರಾದ ಎನ್.ಬಿ. ಶಾಸ್ತಿç, ಎಂ.ಎಂ. ಶೇಖ, ಆರ್.ಎಲ್. ಬಾಗಲಕೋಟ, ಮಹ್ಮದ ಇಕ್ಬಾಲ್ ಹಣಗಿ, ಗುಲ್ಜಚಾರ್‌ಭಾನು ಮುಜಾವರ, ಯಲ್ಲಪ್ಪ ತೋಟದ, ಕೌಶಲ್ಯಬಾಯಿ ಕಲಾಲ, ಶಾನವಾಜ ಉಮಚಗಿ, ಬಿ.ಎಸ್. ಢಾಲಾಯತ, ಡಿ.ಜಿ. ರೆಹೀಮಾನ ಉಪಸ್ಥಿತರಿದ್ದರು. ಮೌಲಾನಾ ಖುರಾನ ಪಠಿಸಿದರು, ಪ್ರಾಚಾರ್ಯ ಎಂ.ಎಂ. ಶಿರಹಟ್ಟಿ ಪರಿಚಯಿಸಿ ನಿರೂಪಿಸಿದರು. ಯಾಸಿನ್ ಹುಬ್ಬಳ್ಳಿ ವಂದಿಸಿದರು.
ಸಭೆಯಲ್ಲಿ ಶರಣಪ್ಪ ಹೊಸಮನಿ, ಡಾ. ನಂದಗೌಡ್ರ ಬಿರಾದಾರ, ಡಾ. ಪ್ಯಾರಅಲಿ ನೂರಾನಿ, ಎ.ಎಂ. ಮುಲ್ಲಾ, ಶರಣಬಸಪ್ಪ ಗುಡಿಮನಿ, ಎಸ್.ಎ. ಬಿಜಾಪೂರ, ಮಂಜುರಹುಸೇನ ಗುಳೇದಗುಡ್ಡ, ಎಂ.ಎಚ್. ಜಕ್ಕಲಿ ಸೇರಿದಂತೆ ಶೇರುದಾರರು, ಗಣ್ಯರು ಪಾಲ್ಗೊಂಡಿದ್ದರು.
.
ಆಂಗ್ಲೋ ಉರ್ದು ಪಿಯು ಕಾಲೇಜಿನ ಪ್ರಾಚಾರ್ಯ ದಿ.ಎ.ಬಿ. ಖಾಜಿ ಅವರ ನಿಧನಕ್ಕೆ ಸಂತಾಪ ಸೂಚಿಸಲಾಯಿತು. ಸಮಾರಂಭದಲ್ಲಿ ಪ್ರತಿಭಾನ್ವಿತ ವಿದ್ಯಾರ್ಥಿಗಳಾದ ಸಮೃದ್ಧಿ ಶಿದ್ಲಿಂಗ್, ಸಂಜಿದಾ ರಾಮದುರ್ಗ, ಶಾಕೀರಾ ಶಿರಗುಂಪಿ, ರುಕ್‌ಸಾರ್ ಕೊಪ್ಪಳ, ಶಬನಮ್ ಹೊಂಬಳ, ನಫೀಸಾ ಯರಗುಡಿ, ಅಮೀನಾ ಬಾಗಲಿ ಅವರಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
Advertisement