ಎನ್‌ಎಸ್‌ಎಸ್ ಶಿಬಿರದ 6ನೇ ದಿನದ ಕಾರ್ಯಕ್ರಮ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯವು ನಾಗಾವಿ ಗ್ರಾಮದಲ್ಲಿ ಹಮ್ಮಿಕೊಂಡಿರುವ ಎನ್‌ಎಸ್‌ಎಸ್ ವಾರ್ಷಿಕ ವಿಶೇಷ ಶಿಬಿರದ 6ನೇ ದಿನದ ಕಾರ್ಯಕ್ರಮದಲ್ಲಿ ಸ್ವಯಂಸೇವಕರು ನಾಗಾವಿ ಗ್ರಾಮದ ಗ್ರಾ.ಪಂ ಆವರಣ, ಎದುರಿನ ರಸ್ತೆಯನ್ನು ಸ್ವಚ್ಛಗೊಳಿಸಿದರು. ನಂತರ ಗ್ರಾಮದ ವಿವಿಧ ಬಿದಿಗಳಲ್ಲಿ ರೈತರು, ಕೃಷಿ ಮತ್ತು ಮತದಾನದ ಬಗ್ಗೆ ಗ್ರಾಮದ ಜನರಿಗೆ ಅರಿವು ಮೂಡಿಸಿದರು.

Advertisement

ಸಂಜೆ ಉಪನ್ಯಾಸ ಕಾರ್ಯಕ್ರದಲ್ಲಿ ಉಪನ್ಯಾನಕರಗಿ ಆಗಮಿಸಿದ ನಟರಾಜ ರಾನಡೆ ಭಾರತದ ಆರ್ಥಿಕತೆಯಲ್ಲಿ ರೈತರ ಪಾತ್ರ ವಿಷಯವಾಗಿ ಉಪನ್ಯಾಸ ನೀಡಿ, ರೈತರ ಆರ್ಥಿಕತೆ ಸರಿ ಇದ್ದರೆ ದೇಶದ ಆರ್ಥಿಕತೆ ಸುಸ್ಥಿತಿಯಲ್ಲಿರುತ್ತದೆ ಎಂದರು.

ಕಾರ್ಯಕ್ರಮದಲ್ಲಿ ಮಹಾವಿದ್ಯಾಲಯದ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ. ರಾಮಚಂದ್ರ ಪಡೇಸೂರ ಅಧ್ಯಕ್ಷತೆ ವಹಿಸಿ ಮಾತನಾಡುತ್ತಾ ಕೃಷಿಯ ಅವಶ್ಯಕತೆಯ ಬಗ್ಗೆ ಮಾತನಾಡಿದರು. ಅತಿಥಿಗಳಾಗಿ ಮಹಾವಿದ್ಯಾಲಯದ ರಾಜ್ಯಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಪ್ರೊ. ಚೆಂದಾಲಿಂಗ ಹಳ್ಳಿಕೇರಿ, ಎನ್‌ಎಸ್‌ಎಸ್ ಘಟಕದ ಕಾರ್ಯಕ್ರಮಾಧಿಕಾರಿ ಪ್ರೊ. ವಾಗೀಶ ರೇಶ್ಮಿ, ಕಾರ್ಯದರ್ಶಿ ಪವನಕುಮಾರ ಕುಲಕರ್ಣಿ ಮತ್ತು ಸಾಕ್ಷಿ ಹೊಸಮಠ ಸೇರಿದಂತೆ ಎಲ್ಲ ಶಿಬಿರಾರ್ಥಿಗಳು ಉಪಸ್ಥಿತರಿದ್ದರು.

ಸೋನಿಯಾ ಗೋಡಕೆ ಸ್ವಾಗತಿಸಿದರು, ಶಿಬಿರಾರ್ಥಿ ಮಂಜುನಾಥ ಗಾಣಗೇರ ನಿರೂಪಿಸಿದರು, ಮುಸ್ಕಾನ ಕೋಲಕಾರ ವಂದಿಸಿದರು.


Spread the love

LEAVE A REPLY

Please enter your comment!
Please enter your name here