ಶಿವಮೊಗ್ಗದಲ್ಲಿ 7 ವಿದೇಶಿ ಪ್ರಜೆಗಳು ಪತ್ತೆ: ಪೊಲೀಸರಿಂದ ತನಿಖೆ ಚುರುಕು!

0
Spread the love

ಶಿವಮೊಗ್ಗ:- ಇಲ್ಲಿನ ಜಯನಗರ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಶಿವಮೊಗ್ಗದಲ್ಲಿ ನೆಲೆಸಿದ್ದ ಬಾಂಗ್ಲಾದೇಶದ 7 ಪ್ರಜೆಗಳನ್ನು ಪತ್ತೆಹಚ್ಚಿದ್ದಾರೆ.

Advertisement

ಈ 7 ಬಾಂಗ್ಲಾ ಪ್ರಜೆಗಳು ಕಟ್ಟಡ ಕಾಮಗಾರಿ ಕೆಲಸ ಮಾಡುತ್ತಿದ್ದು, ಇವರ ಬಳಿ ಮಂಗಳೂರು ವಿಳಾಸ ಇರುವ ಆಧಾರ್ ಕಾರ್ಡ್​​ ಪತ್ತೆ ಆಗಿದೆ. ಕೆಲಸಕ್ಕೆ ಮೇಸ್ತ್ರಿ ಕರೆದುಕೊಂಡು ಬಂದಿರುವ ಬಗ್ಗೆ ಮಾಹಿತಿ ಇದೆ. ಬಾಂಗ್ಲಾದೇಶದ 7 ಪ್ರಜೆಗಳನ್ನ ಜಯನಗರ ಠಾಣೆಗೆ ಕರೆದೊಯ್ದ ಪೊಲೀಸರು ವಿಚಾರಣೆ ಮಾಡುತ್ತಿದ್ದಾರೆ.

ಇತ್ತೀಚೆಗೆ ಕೆಲವು ದಿನಗಳಿಂದ ರಾಜ್ಯದಲ್ಲಿ ಪಾಕಿಸ್ತಾನಿ ಪ್ರಜೆಗಳು ವಾಸ್ತವ್ಯ ಹೂಡಿದ್ದು ಬಯಲಾಗಿತ್ತು. ಇದರ ಬೆನ್ನಲ್ಲೇ ಉಡುಪಿಯ ಮಲ್ಪೆಯಲ್ಲಿ ಬಾಂಗ್ಲಾ ದೇಶೀ ಪ್ರಜೆಗಳು ಇರುವುದು ಪತ್ತೆಯಾಗಿದ್ದು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದರು ಎನ್ನಲಾಗಿದೆ.


Spread the love

LEAVE A REPLY

Please enter your comment!
Please enter your name here