ಬೆಳಗಾವಿ: ಮಹಾರಾಷ್ಟ್ರದ ಶಿರೋಡಾ ಬೀಚ್‍ನಲ್ಲಿ ಅಲೆಯಬ್ಬರಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ ಆಗಿದ್ದು, ನಾಲ್ವರು ಪಾರಾಗಿರುವ ಘಟನೆ ಜರುಗಿದೆ.
Advertisement
37 ವರ್ಷದ ಇರ್ಫಾನ್, 34 ವರ್ಷದ ಫರೀನ್, 13 ವರ್ಷದ ಇಬಾದ, 15 ವರ್ಷದ ಇಕ್ವಾನ್, 16 ವರ್ಷದ ಅತ್ತಾರ, 34 ವರ್ಷದ ಫರಾನ್, 13 ವರ್ಷದ ಜಾಕೀರ್ ಮೃತರು. ಇಜನಾ ಕಿತ್ತೂರು (10), ಇಮ್ರಾನ್ (42), ಜಬೀನ್ (38) ಸೇಫ್ ಇಸ್ರಾ (16) ಅಪಾಯದಿಂದ ಪಾರಾಗಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ 11 ಜನ ಸೇರಿ ಪ್ರವಾಸಕ್ಕೆಂದು ಮಹಾರಾಷ್ಟ್ರಕ್ಕೆ ಹೋಗಿದ್ದರು. ಆಗ ಬೀಚ್‍ನಲ್ಲಿ ಸಮುದ್ರಕ್ಕೆ ಇಳಿದಾಗ ಅಲೆಗಳಿಗೆ ಸಿಲುಕಿ 7 ಮಂದಿ ಸಾವನ್ನಪ್ಪಿದ್ದಾರೆ. ಉಳಿದ ನಾಲ್ವರು ಬಚಾವ್ ಆಗಿದ್ದಾರೆ. ಇದರಿಂದ ಲೋಂಡಾ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ. ಇಲ್ಲಿಯ ವರೆಗೂ ಐವರ ಮೃತದೇಹಗಳು ಪತ್ತೆಯಾಗಿದ್ದು, ಉಳಿದ ಮೃತದೇಹಗಳಿಗೆ ಹುಡುಕಾಟ ನಡೆಯುತ್ತಿದೆ.