ರಾಯಚೂರು:- ಹೊಲದಲ್ಲಿ ಊಟ ಸೇವಿಸಿದ್ದ ಒಂದೇ ಕುಟುಂಬದ 7 ಜನರು ಅಸ್ವಸ್ಥಗೊಂಡ ಘಟನೆ ಜಿಲ್ಲೆಯ ಮಸ್ಕಿ ತಾಲ್ಲೂಕಿನ ಅಮೀನಗಡ ಗ್ರಾಮದಲ್ಲಿ ಜರುಗಿದೆ.
Advertisement
ಅಸ್ವಸ್ಥರಾದವರನ್ನು ಲಕ್ಷ್ಮೀ, ಮಳಾಪ್ಪ, ಬಸಲಿಂಗಪ್ಪ, ಗೌರಮ್ಮ, ಗುರುಬಸಮ್ಮ ಹಾಗೂ ಮಲ್ಲಿಕಾರ್ಜುನ ಎಂದು ಗುರುತಿಸಲಾಗಿದೆ. ಬೆಳಗ್ಗೆ ಎಲ್ಲರೂ ಹೊಲದಲ್ಲೇ ಕುಳಿತು ಒಟ್ಟಾಗಿ ಊಟ ಮಾಡಿದ್ದರು.
ಊಟದ ಬಳಿಕ ಏಕಾಏಕಿ ಅಸ್ವಸ್ಥರಾಗಿದ್ದು, ಕೂಡಲೇ ಏಳು ಜನರಿಗೆ ಲಿಂಗಸಗೂರು ತಾಲೂಕು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅಸ್ವಸ್ಥರು ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದ್ದು, ಸ್ಥಳಕ್ಕೆ ಆರೋಗ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.