ದೇವರಪಲ್ಲಿ :-ಭೀಕರ ಅಪಘಾತದಲ್ಲಿ 7 ಕಾರ್ಮಿಕರು ದುರ್ಮರಣ ಹೊಂದಿದ ಘಟನೆ ಆಂಧ್ರದಲ್ಲಿ ಜರುಗಿದೆ.
ಇಲ್ಲಿನ ಪೂರ್ವ ಗೋದಾವರಿ ಜಿಲ್ಲೆಯ ದೇವರಪಲ್ಲಿ ತಾಲೂಕಿನ ಚಿಲಕವಾರಿಪಾಕಲ ಎಂಬ ಗ್ರಾಮದ ಬಳಿ ಘಟನೆ ಜರುಗಿದ್ದು, ಮೃತರ ಪೈಕಿ 6 ಕಾರ್ಮಿಕರು ತಾಡಿಮಳ್ಳ ಗ್ರಾಮದ ನಿವಾಸಿಗಳು ಎನ್ನಲಾಗಿದೆ.
ಘಟನೆಯಲ್ಲಿ ಹಲವರಿಗೆ ಗಾಯಗಳಾಗಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಗೋಡಂಬಿ ಲೋಡ್ ತುಂಬಿಕೊಂಡು ತೆರಳುತ್ತಿದ್ದ ಲಾರಿ, ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿ ದುರಂತ ಸಂಭವಿಸಿದೆ.
ಮಂಗಳವಾರ ರಾತ್ರಿ ಈ ರಸ್ತೆ ಅಪಘಾತ ಸಂಭವಿಸಿದೆ. ನರಸಾಪುರಂ ಮಂಡಲದ ಬೊರ್ರಂಪಾಲೆಂನಿಂದ ನಿಡದವೋಲು ಮಂಡಲದ ತಾಡಿಮಲ್ಲ ಕಡೆಗೆ ಲಾರಿ ಹೋಗುತ್ತಿದ್ದಾಗ ಅಪಘಾತ ಸಂಭವಿಸಿದೆ. ಚಿನ್ನಾಯಗುಡೆಂ ಉಪನಗರದಲ್ಲಿ ನಿಯಂತ್ರಣ ತಪ್ಪಿ ಕಾಲುವೆಗೆ ಉರುಳಿದೆ.
ಅಪಘಾತವಾದ ಲಾರಿಯಲ್ಲಿ 10 ಮಂದಿ ಪ್ರಯಾಣಿಸುತ್ತಿದ್ದರು. ಏಳು ಮಂದಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ತಮ್ಮಿ ರೆಡ್ಡಿ ಸತ್ಯನಾರಾಯಣ (45), ದೇಶಭಟ್ಟುಲ ವೆಂಕಟರಾವ್ (40), ಬೊಕ್ಕ ಪ್ರಸಾದ್ (32), ಪೆನುಗುರ್ತಿ ಚಿನ್ನ ಮುಸಲಯ್ಯ (35), ಕತ್ತಿವ ಕೃಷ್ಣ (40), ಕತ್ತಿವ ಸತ್ತಿಪಂಡು (40), ತಾಡಿ ಕೃಷ್ಣ (45) ಮೃತರು ಎಂದು ತಿಳಿದು ಬಂದಿದೆ.