ಅಪ್ರಾಪ್ತರಿಂದ 7 ವರ್ಷದ ಬಾಲಕಿ ಮೇಲೆ ರೇಪ್: ಇಬ್ಬರು ಅರೆಸ್ಟ್!

0
Spread the love

ದಾವಣಗೆರೆ: ದಾವಣಗೆರೆ ತಾಲೂಕಿನ ಗ್ರಾಮವೊಂದರಲ್ಲಿ ಮನೆಯ ಮುಂಭಾಗ ಆಟವಾಡುತ್ತಿದ್ದ ಬಾಲಕಿಯನ್ನು ಇಬ್ಬರು ಅಪ್ರಾಪ್ತ ಬಾಲಕರು ಪುಸಲಾಯಿಸಿ ಕರೆದೊಯ್ದು ಲೈಂಗಿಕ ದೌರ್ಜನ್ಯ ಎಸಗಿದ ಘಟನೆ ಜರುಗಿದೆ.

Advertisement

ನಿನ್ನೆ ಅಂದ್ರೆ ಭಾನುವಾರ ಸಂಜೆ ಮನೆಯ ಮುಂಭಾಗ ಬಾಲಕಿ ಆಡವಾಡುತ್ತಿದ್ದಳು. ಈ ವೇಳೆ ಅಲ್ಲಿಗೆ ಬಂದ 15 ಹಾಗೂ 17 ವರ್ಷದ ಇಬ್ಬರು ಅಪ್ರಾಪ್ತರು ಆಕೆಯನ್ನು ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ.

ಆಟವಾಡುತ್ತಿದ್ದ ಮಗಳು ಕಾಣಿಸದ ಹಿನ್ನಲೆ ಬಾಲಕಿಯ ತಾಯಿ ಅಕ್ಕಪಕ್ಕ ಹುಡುಕಿಕೊಂಡು ಹೋಗಿದ್ದಾರೆ. ಮಗಳನ್ನು ಹುಡುಕಿಕೊಂಡು ನೆರೆ ಮನೆಗೆ ಹೋದಾಗ ಇಬ್ಬರು ಅಪ್ರಾಪ್ತ ಬಾಲಕರು ಅತ್ಯಾಚಾರ ಎಸಗಿದ್ದು ಗೊತ್ತಾಗಿದೆ. ಈ ಸಂಬಂಧ ಬಾಲಕಿಯ ತಾಯಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬಳಿಕ ಪೊಲೀಸರು ಇಬ್ಬರು ಬಾಲಕರನ್ನು ಬಂಧಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here