Mandya: ಮಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವು ಆರೋಪ; ಮೃತ ಮಗು ಮನೆಯವರು ಹೇಳ್ತಿರೋದೇನು?

0
Spread the love

ಮಂಡ್ಯ:- ಇತ್ತೀಚೆಗೆ ವೈದ್ಯರ ನಿರ್ಲಕ್ಷ್ಯಕ್ಕೆ ಸಾಕಷ್ಟು ಸಾವು ಸಂಭವಿಸಿರುವ ವರದಿಗಳನ್ನು ನೋಡಿದ್ದೇವೆ. ಅದರಂತೆ ಮಂಡ್ಯದಲ್ಲೂ ಮಿಮ್ಸ್ ವೈದ್ಯರ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕಿ ಸಾವನ್ನಪ್ಪಿರುವ ಆರೋಪ ಕೇಳಿಬಂದಿದೆ.

Advertisement

ಸಾನ್ವಿ (7) ಮೃತ ಬಾಲಕಿ. ಈಕೆ ಮಳವಳ್ಳಿಯ ನೆಲ್ಲೂರು ಗ್ರಾಮದ ನಿವಾಸಿ ಎನ್ನಲಾಗಿದೆ. ಪಾದದ ಮೂಳೆ ಮುರಿತದಿಂದ ಚಿಕಿತ್ಸೆ ಪಡೆಯುತ್ತಿದ್ದ ಬಾಲಕಿ ಸಾವನ್ನಪ್ಪಿದ್ದು, ಮಿಮ್ಸ್ ಆಸ್ಪತ್ರೆಯ ವೈದ್ಯರ ವಿರುದ್ಧ ಬಾಲಕಿ ಕುಟುಂಬಸ್ಥರು ಸಾಲು ಸಾಲು ಗಂಭೀರ ಆರೋಪ ಮಾಡಿದ್ದಾರೆ.

ಟೈಲ್ಸ್‌ ಬಿದ್ದು ಬಾಲಕಿ ಸಾನ್ವಿಯ ಪಾದದ ಮೂಳೆ ಮುರಿದಿತ್ತು. ಇದರಿಂದ ತಂದೆ ನಿಂಗರಾಜು ಮೇ 29ರ ಗುರುವಾರ ಮಿಮ್ಸ್‌ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಎಲ್ಲಾ ಪರೀಕ್ಷೆಗಳ ನಂತರ ಗುರುವಾರ ರಾತ್ರಿಯೇ ಸಾನ್ವಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಆಪರೇಷನ್‌ ಬಳಿಕ ರಾತ್ರಿಯೇ ಸಾನ್ವಿಯನ್ನ ವಾರ್ಡ್‌ಗೆ ಶಿಫ್ಟ್‌ ಮಾಡಲಾಗಿತ್ತು. ಆದ್ರೆ ಶುಕ್ರವಾರ ಬೆಳಗ್ಗೆಯೇ ಬಾಲಕಿ ಆರೋಗ್ಯದಲ್ಲಿ ಏರುಪೇರಾಗಿದ್ದರಿಂದ ಮತ್ತೆ ತೀವ್ರ ನಿಗಾ ಘಟಕದಲ್ಲಿ ಬಾಲಕಿಗೆ ಚಿಕಿತ್ಸೆ ಮುಂದುವರಿದಿತ್ತು.

ಶನಿವಾರ ಬೆಳಗ್ಗೆ ಡ್ರಿಪ್ಸ್‌ ಮೂಲಕ ಔಷಧಿ ನೀಡಲಾಗಿತ್ತು. ಔಷಧಿ ನೀಡ್ತಿದ್ದಂತೆ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದ ಬಾಲಕಿ ಸಾನ್ವಿ ಶನಿವಾರ ರಾತ್ರಿ 10:30ರಲ್ಲಿ ಮಗು ಸಾವನ್ನಪ್ಪಿರುವುದಾಗಿ ವೈದ್ಯರು ಮಾಹಿತಿ ನೀಡಿದ್ದಾರೆ. ಇದಕ್ಕೆ ವೈದ್ಯರ ನಿರ್ಲಕ್ಷ್ಯವೇ ಕಾರಣ ಅಂತ ಕುಟುಂಬಸ್ಥರು ಆರೋಪಿಸಿದ್ದಾರೆ. ಮೆಡಿಕಲ್ ವಿದ್ಯಾರ್ಥಿಗಳಿಂದ ಚಿಕಿತ್ಸೆ ಕೊಡಿಸಿದ್ದರಿಂದ ಸಾವಾಗಿದೆ ಎಂದು ದೂರಿದ್ದಾರೆ. ಆದ್ರೆ ಇದಕ್ಕೆ ಪ್ರತಿಕ್ರಿಯಿಸಿರುವ ಮಿಮ್ಸ್‌ನ ಆರ್‌ಎಂಒ ಡಾ. ದರ್ಶನ್, ಅಂಗಾಂಗ ವೈಫಲ್ಯದಿಂದ ಬಾಲಕಿ ಸಾವಾಗಿದೆ, ತನಿಖೆ ಮಾಡಿಸಿಕೊಳ್ಳಿ ಅಂತ ಹೇಳಿದ್ದಾರೆ.


Spread the love

LEAVE A REPLY

Please enter your comment!
Please enter your name here