ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ಶಹರ ಘಟಕದದಿಂದ 76ನೇ ಗಣರಾಜ್ಯೋತ್ಸವ ಧ್ವಜಾರೋಹಣ

0
Spread the love

ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಕರ್ನಾಟಕ ರಾಜ್ಯ ನದಾಫ್ ಪಿಂಜಾರ್ ಸಂಘದ ಶಹರ ಘಟಕದ ಸರ್ವ ಸದಸ್ಯರಿಂದ ಸಂತ ಶಿಶುನಾಳ ಶರೀಫ ಶಾಲಾ ಮೈದಾನದಲ್ಲಿ ಗಣರಾಜ್ಯೋತ್ಸವ ಧ್ವಜಾರೋಹಣ ನೆರವೇರಿಸಲಾಯಿತು.

Advertisement

ಶಹರ ಘಟಕದ ಅಧ್ಯಕ್ಷ ಮೈನು ಬಿಜಾಪುರ್ ಧ್ವಜಾರೋಹಣ ನೆರವೇರಿಸಿದರು. ಗದಗ ಜಿಲ್ಲಾ ಕಾರ್ಯದರ್ಶಿ ಎಂ.ಬಿ. ನದಾಫ್ (ವಕೀಲರು) ಗಣರಾಜ್ಯೋತ್ಸವದ ಕುರಿತು ಪ್ರಾಸ್ತಾವಿಕ ಮಾತನಾಡಿದರು. ಶಹರ ಘಟಕದ ಕಾರ್ಯದರ್ಶಿಯಾದ ಜಾಕೀರ ಬಾಗಲಕೋಟ ಸ್ವಾಗತಿಸಿದರು.

ನದಾಫ್ ಪಿಂಜಾರ್ ಸಮಾಜದ ಆಸಿಫ್‌ಅಲಿ ರಂಜಾನ್‌ಸಾಬ್, ಫೈಜಲ್ ನದಾಫ್, ನವೀದ್‌ಸಿದ್ದಾಪುರ, ಡಾಕ್ಟರ್ ನದಾಫ್, ಶಹರ ಘಟಕದ ಖಜಾಂಚಿಯಾದ ಮೋದಿನಸಾಬ್ ಅಣ್ಣಿಗೇರಿ, ನಾಶೀರ್ ಚಿಕೇನಕೊಪ್ಪ ಮುಂತಾದವರಿದ್ದರು.

ಈ ಕಾರ್ಯಕ್ರಮದಲ್ಲಿ ವಿಶೇಷ ಅತಿಥಿಯಾಗಿ ಯುವ ಕರ್ನಾಟಕ ಭೀಮಸೇನೆ ಯುವಶಕ್ತಿ ಸಂಘ ಗದಗ ಜಿಲ್ಲಾ ಅಧ್ಯಕ್ಷ ರಾಮು ಬಾಗಲಕೋಟ ಪಾಲ್ಗೊಂಡಿದ್ದರು. ಭೀಮ ಸೇನೆ ಸಂಘಟನೆ ಶಹರ ಘಟಕದ ಅಧ್ಯಕ್ಷ ಶಬ್ಬೀರ್ ತಹಸೀಲ್ದಾರ್, ಜಿಲ್ಲಾ ಉಪಾಧ್ಯಕ್ಷ ಖಾಜಾಸಾಬ್ ಗಬ್ಬ್ಬೂರ್, ಸದಸ್ಯರಾದ ನಜೀರ್‌ಅಹ್ಮದ್ ಬಳ್ಳಾರಿ, ಖಾದರ್ ಭಾಷಾ ನವಲಗುಂದ್, ಎಂಕಪ್ಪ ತಾಳದವರ್, ಶಬುದ್ದೀನ್ ಧಾರವಾಡ, ಮಹಮ್ಮದ್‌ರಫೀಕ್ ಹಣಗಿ, ಮಹಮ್ಮದರಫೀಕ ಹಣಗಿ, ಮಹಮ್ಮದರಫೀಕ್ ಕರೆಕಾಯಿ, ಸಾದಿಕ್ ಧಾರವಾಡ್ ಭಾಗವಹಿಸಿದ್ದರು. ಬಾಬು (ಹುಸೇನಸಾಬ) ನದಾಫ್ ವಂದಿಸಿದರು.


Spread the love

LEAVE A REPLY

Please enter your comment!
Please enter your name here