ಸ್ವಾತಂತ್ರ್ಯ ಸೇನಾನಿಗಳ ತ್ಯಾಗ ಅಮರ : ಸಿ.ಕೆ. ಬಳೂಟಗಿ

0
78th Independence Day Program
Spread the love

ವಿಜಯಸಾಕ್ಷಿ ಸುದ್ದಿ, ಡಂಬಳ : ಸ್ವಾತಂತ್ರ‍್ಯ ಹೋರಾಟಗಾರರ ಮಾರ್ಗವನ್ನು ಇಂದಿನ ಯುವ ಪೀಳಿಗೆ ಅನುಸರಿಸುವ ಅಗತ್ಯವಿದೆ. ದೇಶಕ್ಕಾಗಿ ಅವರ ತ್ಯಾಗದ ಬದುಕು ಅನುಕರಣೀಯ ಎಂದು ಉಪತಹಸೀಲ್ದಾರ ಸಿ.ಕೆ. ಬಳೂಟಗಿ ಹೇಳಿದರು.

Advertisement

ಡಂಬಳ ಗ್ರಾಮದ ಸರ್ಕಾರಿ ಉರ್ದು ಶಾಲೆಯ ಆವರಣದಲ್ಲಿ 78ನೇ ಸ್ವಾತಂತ್ರ್ಯೋತ್ಯವ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಬಶೀರಹಮ್ಮದ ತಾಂಬೋಟಿ, ಮರಿಯಪ್ಪ ಸಿದ್ದನ್ನವರ, ಬುಡ್ನೆಸಾಬ ಅತ್ತಾರ ಮಾತನಾಡಿ, ದೇಶದ ಸ್ವಾತಂತ್ರೋತ್ಯಕ್ಕಾಗಿ ನಡೆದ ಚಳುವಳಿಯಲ್ಲಿ ಭಾಗಿಯಾದ ಮಹನೀಯರ ತ್ಯಾಗ-ಬಲಿದಾನಗಳನ್ನು ನೆನಪಿಸಿಕೊಳ್ಳುವುದು ಮತ್ತು ಅದನ್ನು ಮುಂದಿನ ಪೀಳಿಗೆಗೆ ತಿಳಿಸಲು ದೇಶಾದ್ಯಂತ ಈ ದಿನವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ದೇಶದ ಸ್ವಾತಂತ್ರ‍್ಯಕ್ಕಾಗಿ ದುಡಿದು, ಮಡಿದ ಹೋರಾಟಗಾರರ ಜೀವನವು ನಮ್ಮ ವಿದ್ಯಾರ್ಥಿ ಸಮುದಾಯಕ್ಕೆ ಎಂದೆಂದಿಗೂ ಸ್ಪೂರ್ತಿದಾಯಕ ಎಂದರು.

ಎಸ್‌ಡಿಎಂಸಿ ಅಧ್ಯಕ್ಷ ಎಂ.ಜೆ. ಕಾಸ್ತಾರ ದ್ವಜಾರೋಣವನ್ನು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಕಂದಾಯ ನಿರೀಕ್ಷಕರು ಪ್ರಭು ಭಾಗಲಿ, ಎಮ್.ಎಮ್. ವಿಬೂತಿ, ಮುಖ್ಯೋಪಾಧ್ಯಾಯ ಡಿ.ಕೆ. ಹೊಳೆಮ್ಮನವರ, ಎಸ್‌ಡಿಎಂಸಿ ಉಪಾಧ್ಯಕ್ಷೆ ಆಸ್ಮಾ ಆಲೂರ, ಹುಸೇನಸಾಬ ಹೊಸಭಾವಿ, ಯುವ ನೇತಾರ ಜಾಕೀರ ಮೂಲಿಮನಿ, ರಾಜೇಸಾಬ ಹೊಂಬಳ, ಗೌಸುಸಾಬ ಡಾಲಾಯತ, ಮೈನುದ್ದಿನ ಆಲೂರ, ಬುಡ್ನೆಸಾಬ ಮೂಲಿಮನಿ, ಬಾಕ್ಷಿಸಾಬ ತಾಂಬೋಟಿ, ಎಸ್‌ಡಿಎಂಸಿ ಸದಸ್ಯರು, ವಿದ್ಯಾರ್ಥಿಗಳು ಇದ್ದರು.


Spread the love

LEAVE A REPLY

Please enter your comment!
Please enter your name here