ವಿಜಯಸಾಕ್ಷಿ ಸುದ್ದಿ, ಗದಗ: ನಗರದ ಮನೋರಮಾ ಕಾಲೇಜಿನಲ್ಲಿ 79ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣವನ್ನು ಸಂಸ್ಥೆಯ ಚೇರಮನ್ ಎನ್.ಎಮ್. ಕುಡತರಕರ ನೆರವೇರಿಸಿದರು.
ಈ ಸಂದರ್ಭದಲ್ಲಿ ಅವರು ಮಾತನಾಡಿ, ದೇಶದ ಸ್ವಾತಂತ್ರ್ಯಕ್ಕಾಗಿ ಅನೇಕ ನಾಯಕರ ಕೊಡುಗೆಯಿದೆ. ರಾಷ್ಟ್ರದ ಪ್ರಗತಿಯಲ್ಲಿ ಯುವಕರ ಪಾತ್ರ ಮಹತ್ವದ್ದಾಗಿದೆ ಎಂದರು.
ಮಹಾವಿದ್ಯಾಲಯದ ಪ್ರಾಚಾರ್ಯ ಬಿ.ಎಸ್. ಹಿರೇಮಠ ಮಾತನಾಡಿ, ಇಂದಿನ ಯುವಕರೇ ಮುಂದಿನ ನಾಯಕರು. ಆದ್ದರಿಂದ ಯುವಕರು ನಾಯಕತ್ವ ಗುಣಗಳನ್ನು ಬೆಳೆಸಿಕೊಂಡು ರಾಷ್ಟ್ರಭಕ್ತಿ, ದೇಶ ಪ್ರೇಮ ಹೆಚ್ಚಿಸಿಕೊಂಡು ಉತ್ತಮ ಪ್ರಜೆಗಳಾಗಿ ಬಾಳಿ ಎಂದರು.
ಸAಸ್ಥೆಯ ಆಡಳಿತಾಧಿಕಾರಿ ಕಿಶೋರ ಮುದಗಲ್ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಮಂಜುನಾಥ ಕುಡತರಕರ, ನಿರ್ದೇಶಕರಾದ ಸಂಜಯಕುಮಾರ ಕುಡತರಕರ, ಚೇತನ ಕುಡತರಕರ, ಬಿ.ಸಿ.ಎ ಸಂಯೋಜಕರಾದ ಪ್ರೊ. ಸವಿತಾ ಪೂಜಾರ, ಪಿ.ಯು.ಸಿ ಸಂಯೋಜಕರಾದ ಪ್ರೊ. ಶಾಹಿದಾ ಶಿರಹಟ್ಟಿ, ಪ್ರೊ. ಆರತಿ ಗೌಡರ, ಪ್ರೊ. ಕುಸುಮ, ದೈಹಿಕ ನಿರ್ದೇಶಕರಾದ ಖಯೂಮ ನವಲೂರ ಇದ್ದರು. ಪ್ರೊ. ಸಂಗಮೇಶ ಹಾದಿಮನಿ ಸ್ವಾಗತಿಸಿದರು.


