ವಿಜಯಸಾಕ್ಷಿ ಸುದ್ದಿ, ಗದಗ : ಸಮತಾ ಸೇನಾ ಗದಗ ಜಿಲ್ಲಾ ವತಿಯಿಂದ ಮಹಾ ಶಿವಶರಣ ಶ್ರೀ ಸಮಗಾರ ಹರಳಯ್ಯನವರ 857ನೇ ಜಯಂತ್ಯುತ್ಸವವನ್ನು ಗದಗ ನಗರದ ಟಾಂಗಾಕೂಟ ವೃತ್ತದಲ್ಲಿ ಆಚರಿಸಲಾಯಿತು.
ಈ ಕಾರ್ಯಕ್ರಮ ಉದ್ಘಾಟಿಸಿದ ಕಾನೂನು, ಸಂಸದೀಯ ಹಾಗೂ ಪ್ರವಾಸೋದ್ಯಮ ಸಚಿವ ಡಾ. ಎಚ್.ಕೆ. ಪಾಟೀಲ ಮಾತನಾಡಿ, ಶಿವಶರಣ ಶ್ರೀ ಸಮಗಾರ ಹರಳಯ್ಯನವರು 12ನೇ ಶತಮಾನದಲ್ಲಿ ಬಸವಣ್ಣನವರ ಅನುಭವ ಮಂಟಪದಲ್ಲಿ ಪ್ರಮುಖರಾಗಿದ್ದರು. ಸಮಗಾರ ಹರಳಯ್ಯನವರ ಸಮಾಜದವರಿಗೆ ಇವರು ದೊಡ್ಡ ಶಕ್ತಿಯಾಗಿದ್ದಾರೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಸಮತಾ ಸೇನಾ ರಾಜ್ಯಾಧ್ಯಕ್ಷ ಗುರು ಉಳ್ಳಿಕಾಶಿ ಮಾತನಾಡಿ, 12ನೇ ಶತಮಾನದಲ್ಲಿಯೇ ಬಸವಣ್ಣನವರ ಅನುಭವ ಮಂಟಪದಲ್ಲಿ ಎಲ್ಲಾ ಸಮಾಜದ, ಅದರಲ್ಲಿಯೂ ಅತ್ಯಂತ ಹಿಂದುಳಿದ ಮತ್ತು ಅಸ್ಪçಶ್ಯ ಸಮಾಜದವರಿಗೆ ಸಮಾನತೆ ನೀಡಿ ಆತ್ಮವಿಶ್ವಾಸವನ್ನು ತುಂಬಿದ ಬಸವಣ್ಣನವರ ಕಾರ್ಯ ಇಂದಿಗೂ ಪ್ರಸ್ತುತವಾಗಿದೆ ಎಂದರು.
ಯುವ ಮುಖಂಡ ಕೃಷ್ಣಗೌಡ ಎಚ್.ಪಾಟೀಲ ಮಾತನಾಡಿ, ಇಂದಿನ ಯುವಕರು ಶರಣರ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಂಡರೆ ಈ ಜಾತಿ ಪದ್ಧತಿಯನ್ನು ಕಿತ್ತೊಗೆಯಲು ಸಾಧ್ಯ ಎಂದರು.
ಸಮತಾ ಸೇನಾ ಜಿಲ್ಲಾ ಅಧ್ಯಕ್ಷ ಕಿರಣ ಗಾಮನಗಟ್ಟಿ ಮಾತನಾಡಿದರು. ಈ ಸಂದರ್ಭದಲ್ಲಿ ಪೀರಸಾಬ ಕೌತಾಳ, ಲೋಹಿತ ಗಾಮನಗಟ್ಟಿ, ಕಲ್ಪನಾ ಹೊನಕೇರಿ, ಮಂಜುನಾಥ ಕೊರವರ, ಸತೀಶ ಮಂಡಲಗೇರಿ, ವಿಜಯ ಗಾಮನಗಟ್ಟಿ, ಸಮಗಾರ ಹರಳಯ್ಯ ಹಿರಿಯರಾದ ಪ್ರೇಮನಾಥ ಗರಗ, ದಶರಥ ಅಗಸಿಮನಿ, ಮಂಜುನಾಥ ಟಗಟರ, ಪ್ರಕಾಶ ಹೊನಕೇರಿ, ಪರಶುರಾಮ ನರಗುಂದ, ನಾಗರಾಜ ಕುಂದರಗಿ, ರೇವಣಸಿದ್ದಪ್ಪ ಮೆಳ್ಳಣ್ಣವರ, ಶ್ರೀಧರ ಅಗಸಿಮನಿ, ವೀರೇಶ ಮುದೇನಗುಡಿಮಠ, ರಮೇಶ ತೇರದಾಳ, ರಮೇಶ ಬೆಣಗಿ, ಗೋಪಾಲ ಅಗಸಿಮನಿ, ಪರಶುರಾಮ ಲಕ್ಕುಂಡಿ, ಯಲ್ಲಪ್ಪ ಉಳ್ಳಿಕಾಶಿ, ಮಂಜುನಾಥ ತೇರದಾಳ, ರವಿ ಅಗಸಿಮನಿ, ವಿನಾಯಕ ಅಗಸಿಮನಿ, ಗಿಡ್ಡಪ್ಪ ತೇರದಾಳ, ಪ್ರಕಾಶ ಕಮಡೊಳ್ಳಿ, ಈಶ್ವರ ಮುಂಡರಗಿ ಮುಂತಾದವರು ಉಪಸ್ಥಿತರಿದ್ದರು.