ನವದೆಹಲಿ: ಮಧ್ಯಪ್ರಾಚ್ಯದಲ್ಲಿ ಉಂಟಾದ ಸಂಘರ್ಷವು ಭಾರತ ದೇಶದ ಹಿತ್ತಲಿಗೆ ತಲುಪಿದ್ದು, ಹಿಂದೂ ಮಹಾಸಾಗರದಲ್ಲಿ ಇರಾನ್‌ನ ಯುದ್ಧ ನೌಕೆ ಮುಳುಗಿ 87 ಮಂದಿ ಸಾವನ್ನಪ್ಪಿದ್ದಾರೆ.
ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿ ಈ ಘಟನೆಯ ಬಗ್ಗೆ ಏನೂ ಹೇಳದೆ ಮೌನವಾಗಿರುವುದನ್ನು ಸಂಸದ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದು, ಜಗತ್ತು ಅಸ್ಥಿರ ಹಂತ ತಲುಪಿದ್ದು, ಸಮುದ್ರದ ಬಿರುಗಾಳಿ ಭಾರತವನ್ನು ಎದುರಿಸುತ್ತಿದೆ. ದೇಶದ ತೈಲ ಸರಬರಾಜಿನ 40% ಗಿಂತ ಹೆಚ್ಚು ಹಾರ್ಮುಜ್ ಜಲಸಂಧಿಯ ಮೂಲಕ ಸಾಗುವುದರಿಂದ ಭದ್ರತೆಗೆ ಅಪಾಯವಾಗಿದೆ.
ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಪೂರೈಕೆ ಪರಿಸ್ಥಿತಿಯು ಗಂಭೀರವಾಗಿದೆ. ಸರ್ಕಾರವು ಕಾರ್ಯತಂತ್ರದ ಸ್ವಾಯತ್ತತೆಯನ್ನು ಕಳೆದುಕೊಂಡಿದ್ದು, ಪ್ರಧಾನಿ ಮೌನ ತಾಳಿದ್ದಾರೆ. ಇಂತಹ ಕ್ಷಣದಲ್ಲಿ ನಮಗೆ ಚಕ್ರದಲ್ಲಿ ಬಲವಾದ ಕೈ ಬೇಕು. ಆದ್ರೆ ಭಾರತವು ನಮ್ಮ ಕಾರ್ಯತಂತ್ರದ ಸ್ವಾಯತ್ತತೆಯನ್ನ ಬಿಟ್ಟುಕೊಟ್ಟ ಹಾಗೂ ರಾಜಿ ಮಾಡಿಕೊಂಡ ಪ್ರಧಾನಿಯನ್ನ ಹೊಂದಿದೆ ಎಂದು ಮೋದಿ ವಿರುದ್ಧ ಆಕ್ಷೇಪ ಹೊರಹಾಕಿದ್ದಾರೆ.



