ಮಂಡ್ಯ:- ಮೂರು ದಿನಗಳ ಕಾಲ ಸಕ್ಕರೆ ನಾಡು ಮಂಡ್ಯದಲ್ಲಿ ನಡೆಯುವ 87ನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಇಂದು ಅದ್ದೂರಿಯಾಗಿ ಚಾಲನೆ ದೊರೆತಿದೆ.
ಮೊದಲ ದಿನದ ಕಾರ್ಯಕ್ರಮವಾದ ಇಂದು ಬಹಳ ಸಡಗರ ಸಂಭ್ರಮದಿಂದ ಜರುಗಿದೆ. ಅದರಂತೆ ನಾಳೆಯೂ ವಿವಿಧ ಕಾರ್ಯಕ್ರಮ ನಡೆಯಲಿದ್ದು, ಎಷ್ಟು ಗಂಟೆಗೆ ಯಾವ ಕಾರ್ಯಕ್ರಮ ನಡೆಯಲಿದೆ ಎಂಬುದರ ಸಮಗ್ರ ಮಾಹಿತಿ ಇಲ್ಲಿದೆ.
ಗೋಷ್ಟಿಗಳು ನಾಳೆ ಬೆಳಗ್ಗಿನಿಂದ ಆರಂಭವಾಗಿ ಸಂಜೆವರೆಗೆ ನಡೆಯಲಿದೆ. ಬೆಳಿಗ್ಗೆ 9.30 ರಿಂದ 11 ಗಂಟೆಯವರೆಗೆ ಪ್ರಧಾನ ವೇದಿಕೆಯಲ್ಲಿ ನೆಲ-ಜಲ ಸಾಕ್ಷಾರತೆ : ಅವಲೋಕನ ವಿಷಯದ ಬಗ್ಗೆ ಮೂರನೇ ಗೋಷ್ಠಿ ನಡೆಯಲಿದೆ. ನೀರಾವರಿ ತಜ್ಞರು ಕ್ಯಾಪ್ಟನ್ ರಾಜಾರಾವ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಚಿಂತಕರು ಡಾ. ಅಶೋಕ ದಳವಾಯಿ ಅವರು ಆಶಯ ನುಡಿ ನುಡಿಯಲಿದ್ದಾರೆ.
ಕಾವೇರಿ ಅಚ್ಚುಕಟ್ಟಿನ ಕೆರೆಕಟ್ಟೆಗಳ ಸ್ಥಿತಿಗತಿಗಳು ವಿಷಯದ ಬಗ್ಗೆ ಡಾ. ಎಂ. ಎನ್. ತಿಮ್ಮೇಗೌಡ, ಕೃಷ್ಣಾ ಮತ್ತು ಮಹಾದಾಯಿ ವಿಷಯದ ಬಗ್ಗೆ ಡಾ. ಕೃಷ್ಣ ಕೋಲ್ಹಾರಕುಲಕರ್ಣಿ ಹಾಗೂ ಕೃಷಿಕರು ಮತ್ತು ಜನಸಾಮಾನ್ಯರಲ್ಲಿ ಇರಬೇಕಾದ ನೆಲ-ಜಲ ಸಾಕ್ಷಾರತೆ ವಿಷಯದ ಬಗ್ಗೆ ಡಾ. ಎ. ಬಿ. ಪಾಟೀಲ್ ಅವರು ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ – ಓಂ ಪ್ರಕಾಶ್ ದಡ್ಡೆ, ಸ್ವಾಗತ – ಬಿ ಟಿ ನಾಗೇಶ್, ನಿರೂಪಣೆ – ಬಿ ಎನ್ ವಾಸರೆ, ವಂದನಾರ್ಪಣೆ – ಬಿ ಹೆಚ್ ಸತೀಶ್ ಗೌಡ ಅವರು ಮಾಡಲಿದ್ದಾರೆ.
ನಾಲ್ಕನೇ ಗೋಷ್ಠಿಯು ಬೆಳಿಗ್ಗೆ 11 ರಿಂದ 12.30 ಗಂಟೆಯಯವರೆಗೆ ಸಾಹಿತ್ಯದಲ್ಲಿ ರಾಜಕೀಯ : ರಾಜಕೀಯದಲ್ಲಿ ಸಾಹಿತ್ಯ ವಿಷಯದ ಬಗ್ಗೆ ನಡೆಯಲಿದೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಹೆಚ್.ಕೆ. ಪಾಟೀಲ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ರಾಜಕೀಯ ಚಿಂತಕರು ಡಾ.ಬಿ. ಎಲ್. ಶಂಕರ್ ಅವರು ಆಶಯ ನುಡಿಯನ್ನು ನೆರವೇರಿಸಲಿದ್ದಾರೆ.
ರಾಜಕೀಯ ಚಿಂತಕ ಸಿ.ಟಿ. ರವಿ ಅವರು ಸಾಹಿತ್ಯ ಕೇಂದ್ರಿತವಾದ ಸೈದ್ಧಾಂತಿಕ-ರಾಜಕೀಯ ನಿಲುವುಗಳು, ರಾಜಕೀಯ ಚಿಂತಕ ಡಾ. ಕೆ. ಅನ್ನದಾನಿ ಅವರು ರಾಜಕಾರಣಿಗಳಿಗಿರಬೇಕಾದ ಸಾಹಿತ್ಯ ಪ್ರಜ್ಞೆ ಹಾಗೂ ರಾಜಕೀಯ ವಿಶ್ಲೇಷಕರು ರವೀಂದ್ರ ರೇಷ್ಮೆ ಅವರು ಸಾಹಿತ್ಯ ಕೃತಿಗಳಲ್ಲಿ ಕಂಡು ಬರುವ ರಾಜಕೀಯ ಚಿತ್ರಣ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ – ಡಿ. ಎಸ್.ಕೃಷ್ಣಾರೆಡ್ಡಿ, ಸ್ವಾಗತ – ಕೆ. ಎಸ್. ಸಿದ್ಧಲಿಂಗಪ್ಪ, ನಿರೂಪಣೆ – ಕೊಂಡಳ್ಳಿ ಪ್ರಭಾಕರ್ ಶೆಟ್ಟಿ, ವಂದನಾರ್ಪಣೆ – ನಾಗೇಂದ್ರ ಎನ್. ಅವರು ನೆರವೇರಿಸಲಿದ್ದಾರೆ.
ಐದನೇ ಗೋಷ್ಠಿ ಮಧ್ಯಾಹ್ನ 12.30 ರಿಂದ 1.30 ರವರೆಗೆ ಕರ್ನಾಟಕ -50: ಹಿನ್ನೋಟ -ಮುನ್ನೋಟ, ಕನ್ನಡವೆಂದರೆ ಬರೀ ನುಡಿಯಲ್ಲ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನಡೆಯಲಿದೆ. ಹಿರಿಯ ವಿದ್ವಾಂಸ ಡಾ. ನರಹಳ್ಳಿ ಬಾಲಸುಬ್ರಮಣ್ಯ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಶಂಕರ ಹಲಗತ್ತಿ ಅವರು ಹೆಸರಾಯಿತು ಕರ್ನಾಟಕ – ಉಸಿರಾಯಿತು ಕನ್ನಡ ವಿಷಯದ ಬಗ್ಗೆ ಹಾಗೂ ರಾಘವೇಂದ್ರ ಪಾಟೀಲ ಅವರು ಐದು ದಶಕಗಳ ಚಾರಿತ್ರಿಕ ಮತ್ತು ಸಾಂಸ್ಕೃತಿಕ ನೋಟ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ – ನಿತ್ಯಶ್ರೀ ಎಂ.ಎಸ್., ಸ್ವಾಗತ – ಸಿದ್ದಪ್ಪ ಹೊಟ್ಟಿ, ನಿರೂಪಣೆ – ಸುಮತಿ ಎ. ಜಿ. ವಂದನಾರ್ಪಣೆ – ಹಣಮಂತ ಶೇರಿ ಖಚೋರಿ ಅವರು ನೆರವೇರಿಸಲಿದ್ದಾರೆ.
ಆರನೇ ಗೋಷ್ಠಿ ಮಧ್ಯಾಹ್ನ 1.30 ರಿಂದ 3 ಗಂಟೆಯವರೆಗೆ ಮಂಡ್ಯ ನೆಲ ಮೂಲದ ಮೊದಲುಗಳು ವಿಷಯದ ಬಗ್ಗೆ ಗೋಷ್ಠಿ -6 ನಡೆಯಲಿದೆ. ಖ್ಯಾತ ವಾಗ್ಮಿಗಳು ಪ್ರೊ. ಎಂ. ಕೃಷ್ಣೆಗೌಡ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ಪ್ರೊ.ಬಿ.ಶಿವಲಿಂಗಯ್ಯ ಅವರು ಕೆರೆ, ಅಣೆಕಟ್ಟೆ, ಸೇತುವೆ, ಕಾಲುವೆಗಳ ನಿರ್ಮಾಣ ವಿಷಯದ ಬಗ್ಗೆ, ಡಾ. ವಿ. ನಾಗೇಂದ್ರ ಪ್ರಸಾದ್ ಅವರು ರಂಗಭೂಮಿ, ಚಲನಚಿತ್ರ ಮತ್ತು ಕಿರುತೆರೆ ವಿಷಯದ ಬಗ್ಗೆ, ಡಾ.ಕೆಂಪಮ್ಮ ಅವರು ಜನಪದ, ನವೀನ್ ಕುಮಾರ್ ಅವರು ಜಲವಿದ್ಯುತ್ ವಿಷಯದ ಬಗ್ಗೆ ನವೀನ್ ಕುಮಾರ್ ಅವರು ವಿಷಯ ಮಂಡನೆ ಮಾಡಲಿದ್ದಾರೆ.
ಏಳನೇ ಗೋಷ್ಠಿಯು ಮಧ್ಯಾಹ್ನ – 3 ರಿಂದ 5.05 ಗಂಟೆಯವರೆಗೆ ಕರ್ನಾಟಕದ ಮೌಖಿಕ ಪರಂಪರೆಗಳ ಪ್ರದರ್ಶನ ಮತ್ತು ವಿವರಣೆ ವಿಷಯದ ಬಗ್ಗೆ ನಡೆಯಲಿದೆ. ಹಿರಿಯ ಜಾನಪದ ತಜ್ಞ ಡಾ. ವೀರಣ್ಣ ದಂಡೆ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಕಾ.ರಾಮೇಶ್ವರಪ್ಪ ಅವರು ಮಂಟೇಸ್ವಾಮಿ ಕಾವ್ಯ, ನಂಜುಂಡಸ್ವಾಮಿ ಪಿ.ಎಂ. ಅವರು ಮೂಡಲಪಾಯ, ಎಂ. ಮೋಹನ್ ಅವರು ಜುಂಜಪ್ಪ ಕಾವ್ಯ, ಮಲ್ಲವ್ವ ಮೇಗೇರಿ ಅವರು ಶ್ರೀಕೃಷ್ಣ ಪಾರಿಜಾತ, ನಾಗರಾಜ ತೋಂಬ್ರಿ ಅವರು ಜೋಗಿ ಕಥಾನಕ ವಿಷಯದ ಬಗ್ಗೆ ವಿಷಯ ಮಂಡನೆ ಮಾಡಲಿದ್ದಾರೆ. ಕಾರ್ಯಕ್ರಮದ ನಿರ್ವಹಣೆ – ಜಿ. ವೈ. ಪದ್ಮ, ಸ್ವಾಗತ – ಸುರೇಶ್ ಚನ್ನಶೆಟ್ಟಿ, ನಿರೂಪಣೆ -ಡಾ. ರೇಷ್ಮಾ ಅಂಗಡಿ, ವಂದನಾರ್ಪಣೆ- ಕೆ.ಆರ್.ಮಮತೇಶ್ ಅವರು ನೆರವೇರಿಸಲಿದ್ದಾರೆ.