ನಾಳೆಯಿಂದ 8ನೇ ಆವೃತ್ತಿಯ `ಪುಲಿಗೆರೆ ಉತ್ಸವ’

0
Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ: ಲಕ್ಷ್ಮೇಶ್ವರದ ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಇನ್ಫೋಸಿಸ್ ಪ್ರತಿಷ್ಠಾನದ ಸಹಕಾರ ಹಾಗೂ ಭಾರತೀಯ ವಿದ್ಯಾಭವನ ಸಹಯೋಗದಲ್ಲಿ 8ನೇ ಆವೃತ್ತಿಯ `ಪುಲಿಗೆರೆ ಉತ್ಸವ’ ಫೆ.21ರಿಂದ 23ರವರೆಗೆ ಜರುಗಲಿದೆ.

Advertisement

ಫೆ.21ರಂದು 6 ಗಂಟೆಗೆ ಭಾರತೀಯ ವಿದ್ಯಾಭವನದ ಜಂಟಿ ನಿರ್ದೇಶಕಿ ನಾಗಲಕ್ಷ್ಮಿ ಕೆ.ರಾವ್ ಮತ್ತು ಶ್ರೀ ಸೋಮೇಶ್ವರ ಭಕ್ತರ ಸೇವಾ ಟ್ರಸ್ಟ್ ಕಮಿಟಿ ಅಧ್ಯಕ್ಷ ಚಂಬಣ್ಣ ಬಾಳಿಕಾಯಿ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಅತಿಥಿಗಳಾಗಿ ಇನ್ಫೋಸಿಸ್ ಪ್ರತಿಷ್ಠಾನದ ಸಿಎಸ್‌ಆರ್ ವಿಭಾಗದ ವ್ಯವಸ್ಥಾಪಕರಾದ ಪ್ರಶಾಂತ ಹೆಗಡೆ ಸೇರಿ ಹಲವರು ಆಗಮಿಸುವರು.

ಬೆಳಿಗ್ಗೆ 6ಕ್ಕೆ ಎಸ್.ಬಿ. ಭಜಂತ್ರಿ ಹಾಗೂ ಸಹ ಕಲಾವಿದರಿಂದ ಶಹನಾಯಿ ವಾದನ, ಬೆಳಿಗ್ಗೆ 7ಕ್ಕೆ ಪರಶುರಾಮ ಭಜಂತ್ರಿ ಸಹ ಕಲಾವಿದರಿಂದ ಸಂಗೀತ ಸೇವೆ ನಡೆಯಲಿದೆ. ಸಂಜೆ 4ಕ್ಕೆ ಸೋಮೇಶ್ವರನ ಪಲ್ಲಕ್ಕಿ ಉತ್ಸವ ಸಕಲ ವಾದ್ಯಮೇಳದೊಂದಿಗೆ ನೆರವೇರಲಿದೆ. ಸಂಜೆ 6ಕ್ಕೆ ಮೃತ್ಯುಂಜಯ ದೊಡ್ಡವಾಡ ಅವರಿಂದ ವಚನ, ಜನಪದ, ತತ್ವ ಪದಗಳ ಪ್ರಸ್ತುತಿ, 7ಕ್ಕೆ ಸಿದ್ಧಾಪುರದ ಕೊಳಗಿ ಕೇಶವ ಹೆಗಡೆ ತಂಡದಿಂದ ಯಕ್ಷಗಾನ, 8.30ಕ್ಕೆ ಹುಬ್ಬಳ್ಳಿಯ ಭಾಗ್ಯಶ್ರೀ ಗಾಳೆಮ್ಮ ತಂಡದಿಂದ ಜಾನಪದ ನೃತ್ಯ ಪ್ರದರ್ಶನಗೊಳ್ಳಲಿದೆ.

ಫೆ.22ರ ಉದಯರಾಗ ಕಾರ್ಯಕ್ರಮದಲ್ಲಿ ಬೆಳಿಗ್ಗೆ 6ಕ್ಕೆ ಗದುಗಿನ ರಾಜೀವ ಈಶ್ವರ ಹಿರೇಮಠ ಅವರಿಂದ ಸಿತಾರ್ ವಾದನ, 7ಕ್ಕೆ ಡಾ.ಶಿವಬಸಯ್ಯ ಗಡ್ಡದಮಠ ಮತ್ತು ಸಹ ಕಲಾವಿದರಿಂದ ಹಿಂದೂಸ್ತಾನಿ ಗಾಯನ, ಸಂಜೆ 6ಕ್ಕೆ ಅರ್ಚನಾ ಕಾಮತ್ ಮತ್ತು ತಂಡದಿಂದ ಹಿಂದೂಸ್ತಾನಿ ಗಾಯನ, 7ಕ್ಕೆ ಬೆಂಗಳೂರಿನ ಕೌಶಲ್ಯ ನಿವಾಸ್ ತಂಡದಿಂದ ನೃತ್ಯ ನಾಟಕ, ರಾತ್ರಿ 8.30ಕ್ಕೆ ಸ್ಥಳೀಯ ಕಲಾವಿದೆ ಭವ್ಯ ಕತ್ತಿ ತಂಡದಿಂದ ಭರತನಾಟ್ಯ ಪ್ರದರ್ಶನವಿದೆ ಎಂದು ಪ್ರಕಟಣೆ ತಿಳಿಸಿದೆ.


Spread the love

LEAVE A REPLY

Please enter your comment!
Please enter your name here